ಗುರುವಾರ , ಸೆಪ್ಟೆಂಬರ್ 23, 2021
26 °C

ಪುತ್ರನಿಗೆ ಮುದ್ದಾದ ಹೆಸರಿಟ್ಟ ಯಶ್‌-ರಾಧಿಕಾ ಪಂಡಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿಗೆ ಕಳೆದ ವರ್ಷ ಗಂಡು ಮಗು ಜನಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರ ಪುತ್ರನಿಗೆ 10 ತಿಂಗಳು. ಮಗನಿಗೆ ಈ ದಂಪತಿ ಯಾವಾಗ ನಾಮಕರಣ ಮಾಡುತ್ತಾರೆ ಎಂಬುದಕ್ಕೆ ಇಂದು ಉತ್ತರ ಸಿಕ್ಕಿದೆ. ಯಶ್‌ ಸರಳವಾಗಿಯೇ ಪುತ್ರನ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದು, ‘ಯಥರ್ವ್‌ ಯಶ್‌’ ಎಂದು ಹೆಸರಿಟ್ಟಿದ್ದಾರೆ.

 
 
 
 

 
 
 
 
 
 
 
 
 
 
 

A post shared by Radhika Pandit (@iamradhikapandit) on

ಸಾಮಾಜಿಕ ಜಾಲತಾಣಗಳಲ್ಲಿ ಯಶ್‌ ದಂಪತಿ ಯಾವಾಗ ಪುತ್ರನಿಗೆ ಹೆಸರಿಡುತ್ತಾರೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ‘ಆಯುಷ್‌’ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಕೊನೆಗೆ, ರಾಧಿಕಾ ಪಂಡಿತ್‌ ಅವರೇ ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದು ಉಂಟು. ಈಗ ಅಧಿಕೃತವಾಗಿ ಪುತ್ರನ ಹೆಸರನ್ನು ಘೋಷಿಸಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಯಥರ್ವ್ ಎಂದರೆ ಪರಿಪೂರ್ಣ ಎಂದರ್ಥ.

ಶಾಸ್ತ್ರೋಕ್ತವಾಗಿಯೇ ನಾಮಕರಣ ನಡೆದಿದೆ. ಕುಟುಂಬದ ಸದಸ್ಯರಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಾಮಕರಣ ಕಾರ್ಯಕ್ರಮದ ವಿಡಿಯೊ ಮಾಡಿರುವ ಯಶ್‌ ದಂಪತಿ ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ. ಅವರ ಪುತ್ರಿ ಆಯ್ರಾ ತಮ್ಮನ ಹೆಸರನ್ನು ಮುದ್ದಾಗಿ ಹೇಳಿರುವುದು ಗಮನ ಸೆಳೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು