ಯುಎಇ ಮೂಲದ ಫಾರ್ಸ್ ಫಿಲ್ಮ್ಸ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಸಾಗರೋತ್ತರ ವಿತರಣೆ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೇಳಿದೆ.

ಗೀತು ಮೋಹನ್ದಾಸ್ ನಿರ್ದೇಶನದ ಚಿತ್ರ ಮಾರ್ಚ್.19ರಂದು ತೆರೆ ಕಾಣಲಿದೆ. ಫಾರ್ಸ್ ಫಿಲ್ಮ್ಸ್ ವಿದೇಶಗಳಲ್ಲಿ ‘ಟಾಕ್ಸಿಕ್’ ಚಿತ್ರವನ್ನು ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಮಾಡಲಿದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು, ಇಂಗ್ಲಿಷ್ ಆವೃತಿಯ ಹಕ್ಕನ್ನು ಕೆವಿಎನ್ ಸಂಸ್ಥೆ ಉಳಿಸಿಕೊಂಡಿದೆ. ‘ಈ ಒಪ್ಪಂದದಂತೆ ವಿದೇಶಗಳಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ₹105 ಕೋಟಿ ಮುಂಗಡ ಪಾವತಿಸಿ ಫಾರ್ಸ್ ಫಿಲ್ಮ್ಸ್ ಹಕ್ಕನ್ನು ಖರೀದಿಸಿದೆ. ಇದು ಭಾರತೀಯ ಚಿತ್ರೋದ್ಯಮದಲ್ಲಿ ಬೃಹತ್ ಮೊತ್ತದ ವಹಿವಾಟು. ಭಾರತದಲ್ಲಿ ಬೇರೆ, ಬೇರೆ ಭಾಷೆಯ ವಿತರಣೆ ಹಕ್ಕನ್ನು ಸ್ಥಳೀಯ ವಿತರಣಾ ಸಂಸ್ಥೆಗಳು ಖರೀದಿಸಿವೆ’ ಎಂದು ಕೆವಿಎನ್ನ ಸುಪ್ರೀತ್ ಹೇಳಿದ್ದಾರೆ.

ಚಿತ್ರದಲ್ಲಿ ಮೆಲಿಸಾ ಆಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಕೂಡ ನಟಿಸಿದ್ದಾರೆ.

ಗೋವಾದಲ್ಲಿನ ಡ್ರಗ್ಸ್ ಮಾಫಿಯಾದ ಕಥೆಯನ್ನು ಚಿತ್ರ ಹೊಂದಿದೆ. ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್ಸ್ಟರ್ ಮೈಂಡ್ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.