ಬುಧವಾರ, ಆಗಸ್ಟ್ 21, 2019
22 °C

ವೈಬುಲ್ಸ್‌ ಪಾರ್ಟಿ ಸಾಂಗ್‌ಗೆ 60 ಲಕ್ಷ ಹಿಟ್ಸ್‌!

Published:
Updated:

ಹಲವು ಸಿನಿಮಾಗಳಲ್ಲಿ ತೆರೆಯ ಹಿಂದೆ ಸಹಾಯಕ ನೃತ್ಯ ನಿರ್ದೇಶಕನಾಗಿ ದುಡಿದ ಅನುಭವವಿರುವ ಗಾಯಕ ಮತ್ತು ಡಾನ್ಸರ್‌ ಯುವರಾಜ್‌ ವೈಬುಲ್ಸ್‌ಗೆ ಸಿನಿಮಾರಂಗದಲ್ಲಿ ಮಿಂಚಬೇಕೆಂಬ ಹಂಬಲ. ಅವಕಾಶ ಕೊಡುತ್ತೀವಿ ಎಂದು ನಂಬಿಸಿ, ಕೈಬಿಟ್ಟವರ ಎದುರು ಸೆಟೆದು ನಿಲ್ಲಬೇಕೆಂಬ ಛಲ. ಸಿನಿಮಾ ಮಾಡುವ ಮೊದಲು, ತನ್ನ ಪ್ರತಿಭೆಯನ್ನು ಆಲ್ಬಂ ಸಾಂಗ್‌ ಮೂಲಕ ತೋರಿಸಲು ಹೊರಟಿದ್ದಾರೆ ಅವರು. ಇದೇ ಉಮೇದಿನಲ್ಲಿ ಮಾಡಿರುವ ಎರಡು ಆಲ್ಬಂ ಸಾಂಗ್‌ಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.

‘ವೈಬುಲ್ಸ್‌ ರಾಕ್ಸ್‌’ ಬ್ಯಾನರ್‌ನಡಿ ನಿರ್ಮಿಸಿರುವ ‘ವೈಬುಲ್‌’ ಪಾರ್ಟಿ ಸಾಂಗ್‌ ಅನ್ನು ಈಗಾಗಲೇ ಯೂಟೂಬ್‌ ಚಾನೆಲ್‌ನಲ್ಲಿ 60 ಲಕ್ಷ ಜನರು ವೀಕ್ಷಿಸಿದ್ದಾರೆ. ‘ಕಳ್ದೋಗ್ಬುಟ್ಟೆ ಕಣೆ ನಿನ್ನ ನೋಡಿ’ ಲಿರಿಕಲ್‌ ಹಾಡಿಗೆ ಮುಂಬೈನ ನಟಿ ಸುಶ್ಮಿತಾ ಜೋಷಿ ಜತೆಗೆ ಫೋಟೊ ಶೂಟ್‌ ಮಾಡಿದ್ದು, ‘ಡಿ ಬೀಟ್ಸ್‌’ ಯೂಟೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ 15 ದಿನಗಳೊಳಗೆ ವೀಕ್ಷಕರು ಟಿಕ್‌ಟಾಕ್‌ ಮಾಡಿ ಕಳುಹಿಸಿದರೆ, ಆಯ್ಕೆಯಾಗುವ ಅತ್ಯುತ್ತಮ ನೃತ್ಯದ ಹೆಜ್ಜೆಗಳನ್ನು ಈ ಆಲ್ಬಂನ ವಿಡಿಯೊ ಸಾಂಗ್‌ನ ಆರಂಭದಲ್ಲಿ ಸೇರಿಸಿಕೊಳ್ಳಲಿದ್ದಾರಂತೆ.

ಆಲ್ಬಂ ಸಾಂಗ್‌ ಬಿಡುಗಡೆಯಲ್ಲಿ ಅತಿಥಿಯಾಗಿ ಮಾತನಾಡಿದ ನಟ ಹರೀಶ್‌ ರಾಜ್‌, ಈ ಎರಡು ಹಾಡುಗಳು ಯುವಜನರ ಮನಸನ್ನು ತಣಿಸಲಿವೆ. ‘ವೈಬುಲ್ಸ್‌ ರಾಕ್ಸ್‌’ ತಂಡ ಯುವಜನರ ನಾಡಿಮಿಡಿತ ಅರಿತು, ಸಾಹಿತ್ಯ ಮತ್ತು ಸಂಗೀತ ಸಂಯೋಜಿಸಿದೆ. ಡಾನ್ಸರ್‌ ಮತ್ತು ಸಿಂಗರ್‌ ಎರಡೂ ಆಗಿರುವುದರಿಂದ ಯುವರಾಜ್‌ಗೆ ಸಾಕಷ್ಟು ಅವಕಾಶಗಳು ಭವಿಷ್ಯದಲ್ಲಿ ಸಿಗಲಿವೆ ಎಂದರು. 

ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ‘ವೈಬುಲ್‌’ ಪಾರ್ಟಿ ಸಾಂಗ್‌ ಅನ್ನು 60 ಲಕ್ಷ ಮಂದಿ ವೀಕ್ಷಿಸಿರುವುದು ಸಾಮಾನ್ಯದ ಮಾತಲ್ಲ. ‘ಕಳ್ದೋಗ್ಬುಟ್ಟೆ ಕಣೆ ನಿನ್ನ ನೋಡಿ’ ಹಾಡು ಕೂಡ ಹವಾ ಎಬ್ಬಿಸಲಿದೆ. ಸಿನಿಮಾ ರಂಗ ಪ್ರವೇಶಿಸಲು ಯುವರಾಜ್‌ ಮಾಡಿಕೊಳ್ಳುತ್ತಿರುವ ಪೂರ್ವ ತಯಾರಿ ಅವರಿಗೆ ಖಂಡಿತ ಯಶಸ್ಸು ತಂದುಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವರಾಜ್‌ ತಂದೆತಾಯಿಗಳಾದ ಅಣ್ಣಾಭೋವಿ ಮತ್ತು ತಾಯಮ್ಮ ಆಲ್ಬಂ ಸಾಂಗ್‌ ಬಿಡುಗಡೆ ಮಾಡಿದರು. ರೂಬಿ ಆಶಾ ಕ್ರಿಯೇಷನ್ಸ್‌ನಡಿ ನಿರ್ಮಿಸಿರುವ ಈ ಆಲ್ಬಂ ಸಾಂಗ್‌ಗಳಿಗೆ ಸೂರಜ್‌ ನಿರ್ದೇಶನವಿದ್ದು, ಯುವರಾಜ್‌ ಪತ್ನಿ ಆಶಾ ಬಂಡವಾಳ ಹೂಡಿದ್ದಾರೆ. 

Post Comments (+)