ಮಂಗಳವಾರ, ಜನವರಿ 18, 2022
22 °C

ಒಳ್ಳೆಯ ಫಲಿತಾಂಶ ಕೊಡುವ ಕಾಲ ಕನ್ನಡಕ್ಕೆ ಬಂದಿದೆ: ಯೋಗರಾಜ್ ಭಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

GGVV

ಬೆಂಗಳೂರು: ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿದ್ದ ರಾಜ್ ಬಿ. ಶೆಟ್ಟಿ ಅವರ ನೂತನ ಚಿತ್ರ ‘ಗರುಡ ಗಮನ ವೃಷಭ ಗಮನ’ಕ್ಕೆ ಪ್ರಶಂಸೆಗಳು ಹರಿದು ಬರುತ್ತಿದೆ.

ನಿರ್ದೇಶಕ ಯೋಗರಾಜ್ ಭಟ್ ಅವರು ಕೂಡ ಗರುಡ ಗಮನ ವೃಷಭ ವಾಹನ ಚಿತ್ರವನ್ನು ನೋಡಿದ್ದಾರೆ.

ಚಿತ್ರ ನೋಡಿ ಮೆಚ್ಚಿಕೊಂಡಿರುವ ಭಟ್, ಗರುಡ ಗಮನ ವೃಷಭ ವಾಹನ ನೋಡಿದೆ. ಒಳ್ಳೆ ಪ್ರಯೋಗಗಳು ಒಳ್ಳೆಯ ಫಲಿತಾಂಶ ಕೊಡುವ ಕಾಲ ಕನ್ನಡಕ್ಕೆ ಬಂದಂತಿದೆ. ನಿರ್ದೇಶಕ ಮಿತ್ರ ರಾಜ್ ಶೆಟ್ಟಿಗೆ ಅಭಿನಂದನೆ, ಶುಭವಾಗಲಿ ಎಂದು ಹಾರೈಸಿ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರೆ.

ಗರುಡ ಗಮನ ವೃಷಭ ವಾಹನ ಚಿತ್ರವನ್ನು ರಾಜ್‌ ಬಿ. ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

ಮಿಧುನ್‌ ಮುಕುಂದನ್‌ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವನ್ನು ಪರಂವಃ ಪಿಕ್ಚರ್ಸ್‌ ನಿರ್ಮಾಣ ಮಾಡಿದ್ದು, ರಾಜ್‌ ಬಿ. ಶೆಟ್ಟಿ, ರಿಷಬ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರೈ ಪಾಣಾಜೆ ಮುಂತಾದವರ ತಾರಾಗಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು