ಶನಿವಾರ, ಡಿಸೆಂಬರ್ 5, 2020
21 °C

ವೈಆರ್‌ 01 ಲಾಂಚ್‌ ವಿಡಿಯೋ ನ. 1ರಂದು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ಯುವ ರಾಜ್‌ಕುಮಾರ್‌ ಅವರ ಮೊದಲ ಚಿತ್ರ ವೈಆರ್‌ 01 (ಯುವ 01) ಚಿತ್ರದ  ಲಾಂಚ್‌ ವಿಡಿಯೋವನ್ನು ನ. 1ರಂದು ರಾಜ್ಯೋತ್ಸವದ ಸಂದರ್ಭ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಟ್ವಿಟರ್‌ನಲ್ಲಿ ಯುವ ರಾಜ್‌ಕುಮಾರ್‌ ಅವರು ಈ ಕುರಿತ 20 ಸೆಕೆಂಡ್‌ಗಳ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. 

ಚಿತ್ರವನ್ನು ಕೆಜಿಎಫ್‌ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅನಂತ್‌ ರುದ್ರನಾಗ್‌ ನಿರ್ದೇಶಿಸುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತವಿದೆ.

ಏ. 24ರಂದು ಈ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಆಗ ಅದಕ್ಕೆ ತಾತ್ಕಾಲಿಕವಾಗಿ ಯುವ 01 ಎಂದು ಹೆಸರಿಡಲಾಗಿತ್ತು. ಈಗ ಬಿಡುಗಡೆ ಮಾಡಿರುವ ಟ್ರೇಲರ್‌ನಲ್ಲಿ ವೈಆರ್‌01 ಎಂದು ತೋರಿಸಲಾಗಿದೆ. 

‘ಇದು ಐತಿಹಾಸಿಕ ಚಿತ್ರ. ಇದರ ಕಥೆಗಾಗಿ ಸಾಕಷ್ಟು ಇತಿಹಾಸಕಾರರ ಜತೆ ಚರ್ಚೆ ಮಾಡಲಾಗಿದೆ. ಅರಮನೆ ಮಾದರಿಯ ಸೆಟ್‌ ಹಾಕಬೇಕಿದೆ. ಹಿಂದಿನ ಘಟನಾವಳಿಗಳೆಲ್ಲವನ್ನೂ ನೈಜವಾಗಿ ತೋರಿಸಲು ಬೇಕಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಯುವ ರಾಜ್‌ ಕುಮಾರ್‌ ಅವರು ಚಿತ್ರಕ್ಕೆ ಬೇಕಾದಂತೆ ಸಮರಕಲೆ, ಕುದುರೆ ಸವಾರಿ ಎಲ್ಲವನ್ನೂ ಕಲಿಯುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾರ್ಯಾಗಾರಗಳನ್ನೂ ನಡೆಸಿದ್ದೇವೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ. 

ಶೀಘ್ರವೇ ಲಾಂಚ್‌ ವೀಡಿಯೋ ಬಿಡುಗಡೆಯಾಗಲಿ. ನಾವು ಕಾಯುತ್ತಿದ್ದೇವೆ ಎಂದು ಯುವ ರಾಜ್‌ ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಟ್ವಿಟರ್‌ ಖಾತೆಯಲ್ಲಿ ಬರೆದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.