ಬುಧವಾರ, ಮೇ 18, 2022
23 °C

ವಾರಾಂತ್ಯದ ಒಟಿಟಿ ಸಿನಿಹಬ್ಬ: ಜೀ 5ನಲ್ಲಿ ಕನ್ನಡದ ‘ಕಾಶ್ಮೀರ್‌ ಫೈಲ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ 5 ಒಟಿಟಿಯಲ್ಲಿ ಈ ವಾರಾಂತ್ಯ ಸಿನಿಪ್ರಿಯರಿಗೆ ಭರ್ಜರಿ ಹೊಸ ಸಿನಿಮಾಗಳು ಲಭ್ಯವಾಗಲಿವೆ. ‘ಕಾಶ್ಮೀರ್‌ ಫೈಲ್ಸ್‌’, ‘ಮುಗಿಲ್‌ ಪೇಟೆ’ ಮತ್ತು ‘ತಲೆದಂಡ’ ಸಿನಿಮಾಗಳು ಮೇ 13ರಿಂದ ಪ್ರಸಾರವಾಗಲಿವೆ. 

ಕನ್ನಡದಲ್ಲಿ ‘ಕಾಶ್ಮೀರ್‌ ಫೈಲ್ಸ್’

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ಕಾಶ್ಮೀರ್‌ ಫೈಲ್ಸ್’ ಇದೇ ಒಟಿಟಿಯಲ್ಲಿ ಕನ್ನಡದಲ್ಲೂ ಮೂಡಿಬರಲಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆ ಆಧರಿಸಿ ತಯಾರಿಸಿದ್ದ ಈ ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ನಟಿಸಿದ್ದಾರೆ. ಈ ಚಿತ್ರ ತಮಿಳು, ತೆಲುಗು ಭಾಷೆಯಲ್ಲೂ ಒಟಿಟಿಯಲ್ಲಿ ಪ್ರಸಾರವಾಗಲಿದೆ. 

ತಲೆದಂಡ 

ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ತಲೆದಂಡ’ ಪ್ರಸಾರವಾಗಲಿದೆ. ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ, ಹೋರಾಟದ ಕಥೆ ಹೊಂದಿದೆ. ಈ ಚಿತ್ರಕ್ಕೆ ಪ್ರವೀಣ್ ಕೃಪಾಕರ್ ನಿರ್ದೇಶನವಿದೆ. ಹರಿಕಾವ್ಯ ಅವರ ಸಂಗೀತ ಸಂಯೋಜನೆಯಿದೆ.

ಕ್ರೇಜಿಪುತ್ರನ ‘ಮುಗಿಲ್ ಪೇಟೆ’

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ ‘ಮುಗಿಲ್ ಪೇಟೆ’ ಜೀ 5ನಲ್ಲಿ ಪ್ರಸಾರ ಆರಂಭವಾಗಿದೆ. ಕಯಾದು ಲೋಹರ್‌ ಈ ಚಿತ್ರದ ನಾಯಕಿ. ಮೇ 13ಕ್ಕೆ ಪ್ರತಿಷ್ಠಿತ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ. ಮನೋರಂಜನ್ ಅವರ ನಾಲ್ಕನೇ ಚಿತ್ರವಿದು. ಭರತ್ ಎಸ್. ನಾವುಂದ ನಿರ್ದೇಶನ, ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು