ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಜೆ.ಕೆ. ಈಗ ಹಿರಿತೆರೆಗೆ ಬರುತ್ತಿದ್ದಾರೆ. ಅವರು ನಾಯಕನಾಗಿ ಅಭಿನಯಿಸಿರುವ ಸಿನಿಮಾ ‘ಮೇ ಫಸ್ಟ್’ (May 1st) ಚಿತ್ರದ ಹಾಡುಗಳ ಸಿ.ಡಿ. ಬಿಡುಗಡೆ ಬೆಂಗಳೂರಿನಲ್ಲಿ ನಡೆದಿದೆ. ಇದನ್ನು ಬಿಡುಗಡೆ ಮಾಡಿದರು ‘ಬಿಗ್ ಬಾಸ್’ ಸುದೀಪ್.

ಮೇ ಫಸ್ಟ್ ಚಿತ್ರದ ಹಾಡುಗಳ ಬಿಡುಗಡೆ ಮೇ 1ನೆಯ ತಾರೀಕಿನಂದು ನಡೆದಿದೆ. ಅಂದು ಜೆ.ಕೆ ಅವರ ಹುಟ್ಟಿದ ಹಬ್ಬದ ಆಚರಣೆ ಕೂಡ ಇತ್ತು. ಬರ್ತ್‌ಡೇ ಹುಡುಗನಿಗೆ ಶುಭಾಶಯ ಕೋರಿದ ಸುದೀಪ್ ಮಾತಿಗೆ ನಿಂತರು. ‘ಥ್ರಿಲ್ಲರ್ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ನೀಡುವುದು ಕಷ್ಟದ ಕೆಲಸ. ಹಾಗಾಗಿ, ಈ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡಿದವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮೇ ಫಸ್ಟ್‌ನಂತಹ ಸಿನಿಮಾಗಳಿಗೆ ತಂತ್ರಜ್ಞರು ಬಹಳ ಮುಖ್ಯವಾಗುತ್ತಾರೆ’ ಎಂದರು ಸುದೀಪ್.

ಜೆ.ಕೆ ಅವರು ಹಿಂದಿ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿರುವ ಸುದ್ದಿಯನ್ನೂ ಸುದೀಪ್ ಹೇಳಿದರು. ‘ಜೆ.ಕೆ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ. ಪ್ರಾಮಾಣಿಕನೂ ಹೌದು. ನಾನು ಅವನನನ್ನು ಮೊದಲಿನಿಂದಲೂ ನೋಡುತ್ತಿದ್ದೇನೆ. ಆತ ತನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತಾನೆ’ ಎಂದು ಬೆನ್ನುತಟ್ಟಿದರು.

‘ನಮ್ಮವರು ಎತ್ತರಕ್ಕೆ ಬೆಳೆದಾಗ ನನಗೆ ಖುಷಿ ಆುತ್ತದೆ. ನಾನು ಜನಪ್ರಿಯತೆಯನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತೇನೆ. ಎಷ್ಟು ಅಭಿಮಾನಿಗಳು ನಿಮಗಿದ್ದಾರೆ ಎನ್ನುವುದು ನಿಮ್ಮ ಜನಪ್ರಿಯತೆಯನ್ನು ನಿರ್ಧರಿಸುವುದಿಲ್ಲ. ಮನುಷ್ಯನಾಗಿ ನೀವು ಎಷ್ಟು ಬೆಳೆದಿದ್ದೀರಿ ಎಂಬುದು ನಿಮ್ಮ ಜನಪ್ರಿಯತೆಯನ್ನು ಅಳೆಯುತ್ತದೆ. ಜೆ.ಕೆ ಬಹಳ ಕಷ್ಟದ ಸಂದರ್ಭಗಳನ್ನು ಎದುರಿಸಿದ್ದಾರೆ. ಆದರೆ ಯಾವ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಂಡಿಲ್ಲ. ಅವರಿಗೆ ಒಳ್ಳೆಯದಾಗುತ್ತದೆ’ ಎಂದು ಹಾರೈಸಿದರು.

‘ಈ ಚಿತ್ರದ ಕಥೆಯೇ ಹೀರೊ. ಎಲ್ಲರೂ ಇದರಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಮಾಡುವುದು ನನ್ನ ಕನಸು’ ಎಂದರು ಜೆ.ಕೆ.

‘ಸಿನಿಮಾ ಬಗ್ಗೆ ಹೇಳಬೇಕಿರುವುದನ್ನು ಜೆ.ಕೆ ಹೇಳಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಸ್ಥಳಗಳನ್ನು ಪರಿಶೀಲಿಸಲು ನಾವು ಹೋಗಿದ್ದಾಗ ನಮಗೆ ರಸ್ತೆ ಅಪಘಾತ ಆಗಿತ್ತು. ಆದರೂ ಚಿತ್ರೀಕರಣ ಶುರು ಮಾಡಿದೆವು’ ಎಂದರು ನಿರ್ದೇಶಕ ನಾಗೇಂದ್ರ ಅರಸ್. ರಕ್ಷಾ, ಯಮುನಾ, ಸಂಜನಾ ಪ್ರಕಾಶ್ ಮತ್ತಿತರರು ಇದರ ತಾರಾಗಣದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.