ಮುಂಬೈ: ತೀರಾ ತೆಳ್ಳಗೆ ಕಾಣಿಸಿಕೊಂಡ ಕಾರಣಕ್ಕೆ ಇತ್ತೀಚೆಗೆ ಟ್ರೋಲ್ ಆಗಿದ್ದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ‘ಫೆಮಿನಾ ಇಂಡಿಯಾ’ ನಿಯತಕಾಲಿಕೆಯ ಮುಖಪುಟ ಚಿತ್ರಕ್ಕಾಗಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೆಷ್ ಟಾಪ್ ಮತ್ತು ಹೈ ಹೀಲ್ಡ್ಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ದೀಪಿಕಾ ಈ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಚಿತ್ರಕ್ಕೆ ಹಲವರು, ‘ಚೆನ್ನಾಗಿ ಕಾಣಿಸುತ್ತಿದ್ದೀರಿ’, ‘ಸುಂದರವಾಗಿದ್ದೀರಿ’ ಎಂಬ ಕಮೆಂಟ್ಗಳನ್ನು ಹಾಕಿದ್ದರೆ ಕೆಲವರು, ‘ಉಡುಗೆ ಕೆಟ್ಟದಾಗಿದೆ’ ಎಂದು ಕೊಂಕು ಕಮೆಂಟಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಚಿತ್ರಕ್ಕೆ 5 ಲಕ್ಷ 23 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದರೆ, ಮೂರೂವರೆ ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.