ಐತಿಹಾಸಿಕ ಸಿನಿಮಾ/ ಧಾರವಾಹಿಗಳಲ್ಲಿ ಸೇನಾಧಿಕಾರಿಗಳ ಪೋಷಾಕು ನೋಡಿದ್ದೀರಾ? ಆ ಸಿನಿಮಾಗಳಲ್ಲೆಲ್ಲ ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್ ರೀತಿಯ ಬಟ್ಟೆಯನ್ನು ಧರಿಸಲಾಗುತ್ತಿತ್ತು. ಮುಂದೆ ಎದೆಯವರೆಗೆ ಹಾಗೂ ಹಿಂದೆ ನೆಲ ತಾಕುವಷ್ಟು ಉದ್ದವಿರುವ ಆ ಉಡುಪಿಗೆ ಕೇಪ್ ಎಂದು ಹೆಸರು.

ಅಷ್ಟೆಲ್ಲಾ ಯಾಕೆ, ಕೇಶ ವಿನ್ಯಾಸದ ಮಳಿಗೆಗೆ ಹೋದಾಗ ನಮ್ಮನ್ನು ಕುರ್ಚಿಯ ಮೇಲೆ ಕೂರಿಸಿ, ಮೈಗೆ ಹೊದೆಸುವ ಬಟ್ಟೆಯೂ ಕೇಪ್ ವಿನ್ಯಾಸದ ಒಂದು ವಿಧ. ಆದರೀಗ ಕೇಪ್ ಕೇವಲ ಬಟ್ಟೆಯಷ್ಟೇ ಅಲ್ಲ, ಫ್ಯಾಷನ್ ಲೋಕದಲ್ಲಿ ಬಾರಿ ಸದ್ದು ಮಾಡುತ್ತಿರುವ ಟ್ರೆಂಡ್. ಪಾರ್ಟಿಯಲ್ಲಿ ಎಲ್ಲರಿಗಿಂತ ಅಂದವಾಗಿ ಕಾಣಿಸಿಕೊಳ್ಳುವ ಆಸೆಯೇ? ಹಾಗಾದ್ರೆ ನಿಮ್ಮ ವಾರ್ಡ್‌ರೋಬ್‌ಗೆ ಕೇಪ್ ಉಡುಪನ್ನು ಸೇರಿಸಿ. ಹಾಫ್ ಬ್ಲೇಝರ್‌ನಂತೆ ಕಾಣುವ ಈ ಉಡುಪನ್ನು ಗಿಡ್ಡನೆಯ ಉಡುಪು, ಮಿನಿ ಸ್ಕರ್ಟ್ ಜೊತೆಗೆ ಮಾತ್ರವಲ್ಲ, ಪಾರ್ಟಿ ಗೌನ್‌ಗಳ ಜೊತೆಗೂ ಧರಿಸಬಹುದು.

ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್ ರೀತಿಯ ಬಟ್ಟೆ ಅದು. ಮುಂದೆ ಎದೆಯವರೆಗೂ ಮುಚ್ಚಿಗೆ; ಹಿಂದೆ ನೆಲ ಸಾರಿಸುವಷ್ಟು ಉದ್ದ.. ಅದುವೇ ಕೇಪ್‌ನ ಆಕರ್ಷಣೆ.

ಐತಿಹಾಸಿಕ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದ್ದ ಕೇಪ್ ಉಡುಪು, ಈಗ ಬೀದಿಬೀದಿಗಳಲ್ಲಿ ದಾರಿಹೋಕರ ಕಣ್ಮನ ಸೆಳೆಯುತ್ತಿದೆ.

ಕೇಳಿರಿ ಕೇಪ್ ಚರಿತೆ...

ಕೇಪ್ ಡ್ರೆಸ್‌ಗಳು ಮೊದಲು ಚಾಲ್ತಿಗೆ ಬಂದದ್ದು ಕ್ರೈಸ್ತ ಸಮುದಾಯದ ಮೆನೊನೈಟ್ ಮಹಿಳೆಯರಿಂದ. ತಮ್ಮ ಸಾಂಪ್ರದಾಯಕ ಉಡುಪಿನ ಭಾಗವಾಗಿ ಅವರು ಕೇಪ್‌ಗಳನ್ನು ಧರಿಸುತ್ತಿದ್ದರು. 19ನೇ ಶತಮಾನದ ಕೊನೆಯವರೆಗೂ ಹೆಚ್ಚು ಸದ್ದು ಮಾಡದ ಈ ದಿರಿಸು ಈಗ ಕೇವಲ ಮೇಲುಡುಪಾಗಿ ಉಳಿದಿಲ್ಲ.

ಗೌನ್ ಜೊತೆಗೇ ಕೇಪ್

ಕೇಪ್ ಅನ್ನು ಗೌನ್ ಮೇಲೆ ಪ್ರತ್ಯೇಕವಾಗಿ ಧರಿಸಬೇಕೆಂದಿಲ್ಲ. ಉದ್ದದ ಗೌನ್ ಜೊತೆಗೆ ಕೇಪ್‌ಗಳು ಸೇರಿಕೊಂಡಿರುತ್ತವೆ. ಹಾಫ್ ಬ್ಲೇಝರ್‌ನಂತೆ ಮುಂದೆ ಮತ್ತು ಹಿಂದೆ, ಮೊಣಕೈವರೆಗೆ ಮಾತ್ರ ಮುಚ್ಚುವ ಕೇಪ್‌ಗಳು ಸದ್ಯದ ಟ್ರೆಂಡ್.

ಗಿಡ್ಡನೆಯ ಕೇಪ್ ಡ್ರೆಸ್

ಗಿಡ್ಡನೆಯ ಉಡುಪು ಪ್ರಿಯರೂ ತಮ್ಮ ದಿರಿಸಿಗೆ ಹೊಸ ಸ್ಪರ್ಶ ನೀಡಬಹುದು.

ಗಿಡ್ಡನೆಯ ಉಡುಪುಗಳ ಮುಂಭಾಗದಲ್ಲಿ ಮೊಣಕೈವರೆಗೆ ಹಾಗೂ ಹಿಂದೆ ಉಡುಪಿನಷ್ಟೇ ಉದ್ದ ಇರುವ ಕೇಪ್‌ಅನ್ನು ಸೇರಿಸಲಾತ್ತದೆ. ಗಿಡ್ಡನೆಯ ರೇಷ್ಮೆ ದಿರಿಸಿನ ಜೊತೆಗೆ ಲೇಯರ್ಡ್ ಕೇಪ್ ಇರುವ ಉಡುಪುಗಳು ಪಾರ್ಟಿಗಳಲ್ಲಿ ಸೊಗಸಾಗಿ ಕಾಣುತ್ತವೆ.

ಪ್ಯಾಂಟ್ ಸೂಟ್‌ಗೂ ಸೈ

ಬೋರಿಂಗ್ ಎನಿಸುವ ಪ್ಯಾಂಟ್ ಸೂಟ್ಸ್/ ಜಂಪ್‌ಸೂಟ್‌ಗೂ ಈಗ ಕೇಪ್ ಹೊಸ ಸೌಂದರ್ಯ ನೀಡಿದೆ. ಮೈಗೆ ಹೊಂದಿಕೊಳ್ಳುವ ಪ್ಯಾಂಟಿಗೆ ಗಿಡ್ಡನೆಯ, ಸೊಂಟದವರೆಗೆ ಬರುವ ಅಥವಾ ಪೂರ್ತಿ ಮುಚ್ಚಿ ನೆಲ ಮುಟ್ಟುವ ಕೇಪ್‌ಗಳು ಜೋಡಿಸಿರುತ್ತವೆ.

ಉದ್ದನೆಯ ಕೇಪ್ ಗೌನ್

ಉದ್ದನೆಯ ಗೌನ್ ಜೊತೆಗೆ, ಇಡೀ ಬೆನ್ನನ್ನು ಮುಚ್ಚಿ, ನೆಲ ಮುಟ್ಟುವಷ್ಟು ಉದ್ದವಿರುವ ಕೇಪ್‌ಗಳು ಜೋಡಣೆ ಆಗಿರುತ್ತವೆ. ಇಂಥ ಗೌನ್‌ಗಳು ಅದ್ಭುತವಾಗಿದ್ದು, ಮದುವೆ ಮುಂತಾದ ದೊಡ್ಡ ಸಮಾರಂಭಗಳಿಗೆ ಈ ಉಡುಪು ಹೇಳಿ ಮಾಡಿಸಿದ್ದಾಗಿದೆ.

ಯಾವುದು ಉತ್ತಮ?

ಕೇಪ್ ದಿರಿಸುಗಳು ನೋಡಲು ಸ್ವಲ್ಪ ಅದ್ದೂರಿ ಅನ್ನಿಸುವುದರಿಂದ ಜೊತೆಗೆ ಧರಿಸುವ ಇತರ ಅಲಂಕಾರಿಕ ಸಾಮಗ್ರಿಗಳು ಸರಳವಾಗಿರಲಿ. ಸ್ಯಾಂಡಲ್ಸ್ ಅಥವಾ ಎತ್ತರ ಹಿಮ್ಮಡದ ಶೂ ಉತ್ತಮ ಆಯ್ಕೆ. ಮೇಕಪ್ ಕೂಡ ತೆಳುವಾಗಿಯೇ ಇರಲಿ.

ಕ್ರಾಪ್ಡ್ ಕೇಪ್/ ಕೇಪ್ಲೆಟ್ಸ್ ( ಸೊಂಟದವರೆಗೆ ಉದ್ದವಿರುವ ಜ್ಯಾಕೆಟ್‌ನಂಥ ಉಡುಪು)ಗಳನ್ನು ಶಾರ್ಟ್ ಸ್ಕರ್ಟ್ ಜೊತೆಗೆ ಧರಿಸಿದರೆ ಚೆನ್ನ.
ನೆರಿಗೆಗಳಿರುವ ಕೇಪ್‌ಗಳನ್ನು ಪೆನ್ಸಿಲ್ ಸ್ಕರ್ಟ್ ಜೊತೆಗೆ ಧರಿಸಬಹುದು. ಮದುವೆಗೆ ಧರಿಸುವ ಬಿಳಿ ಗೌನ್ ಜೊತೆಗೆ ಕೇಪ್ ಅಂದವಾಗಿ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.