ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಯದ ಆ್ಯಕ್ಷನ್–ಥ್ರಿಲ್ಲರ್ ಸಿನಿಮಾ ‘ಮಾರ್ಕ್’ ಸಿನಿಮಾವು ಒಟಿಟಿ ಬಿಡುಗಡೆಗೆ ಸಿದ್ದವಾಗಿದೆ.

‘ಮಾರ್ಕ್’ ಚಿತ್ರವು ಜ.23ರಂದು ‘ಜಿಯೋ ಹಾಟ್ಸ್ಟಾರ್’ನಲ್ಲಿ ತೆರೆಕಾಣಲಿದೆ.

2025ರ ಡಿಸೆಂಬರ್ 25ರಂದು ‘ಮಾರ್ಕ್’ ಸಿನಿಮಾವು ಚಿತ್ರಮಂದಿರದಲ್ಲಿ ತೆರೆಕಂಡಿತ್ತು. ಚಿತ್ರವು ₹25 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.

ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುದೀಪ್ ಮಿಂಚಿದ್ದರು.

48 ಗಂಟೆಯೊಳಗೆ ಮಕ್ಕಳ ಕಳ್ಳಸಾಗಣಿಕೆ ಜಾಲವನ್ನು ಭೇದಿಸಲು ಹೊರಟ ಅಮಾನತ್ತಿನಲ್ಲಿರುವ ಪೊಲೀಸ್ ಅಧಿಕಾರಿಯ ಸುತ್ತ, ಕತೆ ಸಾಗುತ್ತದೆ. ಸುದೀಪ್ ಮಾಸ್ ಗೆಟಪ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸುದೀಪ್, ನವೀನ್ ಚಂದ್ರ, ಗುರು ಸೋಮಸುಂದರಮ್, ಡ್ರ್ಯಾಗನ್ ಮಂಜು, ಯೋಗಿ ಬಾಬು, ಗೋಪಾಲ ಕೃಷ್ಣ ದೇಶಪಾಂಡೆ, ಮಹಂತೇಶ್ ಹಿರೇಮಠ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.