ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡೊಂದಕ್ಕೆ ಹಳ್ಳಿ ಹುಡುಗಿ ಅದ್ಬುತ ನೃತ್ಯ: ವಿಡಿಯೊ ಹಂಚಿಕೊಂಡ ಮಾಧುರಿ ದೀಕ್ಷಿತ್

Last Updated 9 ಫೆಬ್ರುವರಿ 2021, 3:08 IST
ಅಕ್ಷರ ಗಾತ್ರ

ಮುಂಬೈ: ಹಿಂದಿಯ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು 1957 ರ ಚಲನಚಿತ್ರ ಮದರ್ ಇಂಡಿಯಾದ ಹಾಡೊಂದಕ್ಕೆ ನರ್ತಿಸುತ್ತಿರುವ ಬಾಲಕಿಯ ಸುಂದರ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಈ ಹುಡುಗಿ ತುಂಬಾ ಸುಂದರವಾಗಿ ನೃತ್ಯ ಮಾಡುತ್ತಿದ್ದಾಳೆ. ತುಂಬಾ ಪ್ರತಿಭೆಗಳು ಹೊರಬರಲು ಕಾಯುತ್ತಿವೆ" ಎಂದು ಶೀರ್ಷಿಕೆ ನೀಡಿದ್ದಾರೆ. ’ಘೂೂಂಘಟ್ ನಹಿ ಖೋಲೂ ತೋರೆ ಆಗೆ‘ ಹಾಡಿಗೆ ಬಾಲಕಿ ನೃತ್ಯ ಮಾಡಿದ್ದಾಳೆ.

ಎರಡು ನಿಮಿಷಗಳ ವಿಡಿಯೋದಲ್ಲಿ ಬಾಲಕಿ ತೋಟದಲ್ಲಿ ವಯಸ್ಸಾದ ಮಹಿಳೆಯ ರೀತಿ ಕೃಷಿ ಕೆಲಸ ಮಾಡಿಕೊಂಡು ನೃತ್ಯ ಮಾಡುತ್ತಿರುವ ದೃಶ್ಯ ಕುತೂಹಲಕಾರಿಯಾಗಿದೆ.


ಶಾಸ್ತ್ರೀಯ ಸಂಗೀತವನ್ನು ಉತ್ತೇಜಿಸುವ ಸಂಸ್ಥೆ ರಾಗಗಿರಿ ಮೂಲತಃ ಈ ವಿಡಿಯೊ ಟ್ವೀಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸುಮಾರು ನಾಲ್ಕು ಗಂಟೆಗಳಲ್ಲಿ 100ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.

ರಾಗಗಿರಿ ವೆಬ್‌ಸೈಟ್ ಪ್ರಕಾರ, ಎಲ್ಲ ರೀತಿಯ ಸಂಗೀತದ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಸಂಸ್ಥೆ ಕೆಲಸ ಮಾಡುತ್ತದೆ. ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಜೊತೆ ಸಹಕಾರದ ಮೂಲಕ ಹಿಂದುಳಿದ, ದುರ್ಬಲ, ಸವಲತ್ತು ವಂಚಿತ, ಪರಿಶಿಷ್ಟ ಜಾತಿ, ದಲಿತರು, ಅಲ್ಪಸಂಖ್ಯಾತರು, ದೈಹಿಕಮತ್ತು ಮಾನಸಿಕಅಂಗವಿಕಲರ ಜೊತೆಗೆ ಸಂಪರ್ಕ ಸಾಧಿಸಿ ಅವರನ್ನು ಸಂಗೀತದ ಮೂಲಕ ಮುನ್ನಲೆಗೆ ತರುವುದು ನಮ್ಮ ಕೆಲಸವಾಗಿದೆ ಎಂದು ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT