ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ವರ್ಷ ಹಳೆಯ ಫೋಟೊ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ಮೂಲಕ ವೃತ್ತಿಜೀವನ ಆರಂಭಿಸಿ, ಹಾಲಿವುಡ್‌ನಲ್ಲೂ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ, 22 ವರ್ಷ ಹಳೆಯ ಫೋಟೊ ಒಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಪ್ರಿಯಾಂಕಾ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ರೆಸ್ಟೊರೆಂಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ನಿಕ್ ಜೋನಾಸ್ ಜತೆ ಮದುವೆಯಾದ ಬಳಿಕ ಹಾಲಿವುಡ್‌ನಲ್ಲಿ ನಟನೆಯನ್ನು ಮುಂದುವರಿಸಿದ್ದಾರೆ.

ಪ್ರಿಯಾಂಕಾ ಅವರು 2000ನೇ ನವೆಂಬರ್‌ನಲ್ಲಿ ಮಾಲ್ಡೀವ್ಸ್‌ನಲ್ಲಿ ತೆಗೆದಿರುವ ಬೀಚ್‌ ಹಿನ್ನಲೆಯ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಿಯಾಂಕಾ ಚಿತ್ರವನ್ನು ಕಂಡ ಪತಿ ನಿಕ್ ಜೋನಾಸ್, ಬೆಂಕಿಯ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ. ಜತೆಗೆ ಪಿಗ್ಗಿ ಅಭಿಮಾನಿಗಳು ಮತ್ತು ಗೆಳೆಯರು ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT