ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಕ್ಸ್‌ವೆಲ್ ಮದುವೆ ಪಾರ್ಟಿ: 'ಪುಷ್ಪ' ಸಿನಿಮಾ ಹಾಡಿಗೆ ಕೊಹ್ಲಿ ಡ್ಯಾನ್ಸ್

Last Updated 28 ಏಪ್ರಿಲ್ 2022, 9:36 IST
ಅಕ್ಷರ ಗಾತ್ರ

ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರು ಮಾರ್ಚ್‌ 27ರಂದು ವಿವಾಹವಾದರು. ಮದುವೆಯಾದ ಒಂದು ತಿಂಗಳ ಸಂಭ್ರಮದಲ್ಲಿರುವ ಅವರಿಗಾಗಿ ಆರ್‌ಸಿಬಿ ಇತ್ತೀಚೆಗೆ ಪಾರ್ಟಿಆಯೋಜಿಸಿತ್ತು.

ಈ ವೇಳೆ ವಿರಾಟ್‌ ಕೊಹ್ಲಿ ಅವರು, ಅಲ್ಲು ಅರ್ಜುನ್‌ ಅಭಿನಯದ 'ಪುಷ್ಪ' ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದಾರೆ.

ಕಪ್ಪು ಕುರ್ತಾ ಧರಿಸಿದ್ದ ವಿರಾಟ್‌, ಸಹ ಆಟಗಾರರೊಂದಿಗೆ 'ಹೂ ಅಂತಿಯಾ ಮಾಮ, ಊ ಹೂ ಅಂತಿಯಾ?' ಗೀತೆಗೆ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವಈ ವಿಡಿಯೊವನ್ನು 'ಪುಷ್ಪ' ಸಿನಿಮಾದ ಅಧಿಕೃತ ಪೇಜ್‌ನಲ್ಲಿಯೂ ರಿಟ್ವೀಟ್ ಮಾಡಲಾಗಿದೆ.

ಮ್ಯಾಕ್ಸ್‌ವೆಲ್‌ ಅವರು ಈ ಬಾರಿಯ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ಗೆಳತಿ ವಿನಿ ರಾಮನ್ಅವರನ್ನು ಮದುವೆಯಾದರು.

ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರು, ಪಾರ್ಟಿಯಲ್ಲಿ ಹಾಜರಾದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. #BubbleLife ಟ್ಯಾಗ್‌ ಬಳಸಿ, 'ಬಬಲ್‌ನಲ್ಲಿ ಮದುವೆ ಕಾರ್ಯಕ್ರಮ! ಇದೀಗ ಬಬಲ್‌ನಲ್ಲಿ ಕಾರ್ಯಕ್ರಮವನ್ನು ಸಾಧ್ಯವಾದಷ್ಟು ಮಟ್ಟಿಗೆ ಸಂಭ್ರಮಿಸಿದ್ದೇನೆ ಎಂದು ಭಾವಿಸಿದ್ದೇನೆ' ಎಂದು ಬರೆದುಕೊಂಡಿದ್ದರು.

2017ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್‌ ಮತ್ತು ಅನುಷ್ಕಾ ದಂಪತಿಗೆ, ವಮಿಕಾ ಎಂಬ ಹೆಣ್ಣು ಮಗುವಿದೆ. ಈ ಜೋಡಿ, ಮಗುವಿನ ಚಿತ್ರವನ್ನು ಇದುವರೆಗೆ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT