ನಟಿ ಶ್ರುತಿ ಹಾಸನ್ ಬಹುಭಾಷಾ ನಟ ಕಮಲ ಹಾಸನ್ ಅವರ ಪುತ್ರಿ. ಬೆಳ್ಳಿತೆರೆ ಪ್ರವೇಶಿಸುವುದಕ್ಕೂ ಮೊದಲು ಆಕೆ ವೃತ್ತಿಬದುಕು ಆರಂಭಿಸಿದ್ದು ಗಾಯನದ ಮೂಲಕ. ಆಕೆ ಹಾಡಿದ ಮೊದಲ ಚಿತ್ರ ‘ದೇವರ್ ಮಗನ್’. ಇದು ತೆರೆಕಂಡಿದ್ದು 1992ರಲ್ಲಿ.

ದಕ್ಷಿಣ ಭಾರತದಲ್ಲಿ ನಟಿಯಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಆಕೆ ತಮಿಳಿನಲ್ಲಿ ಸಂಗೀತ ನಿರ್ದೇಶಕಿಯಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಉಂಟು. ತಮಿಳು, ತೆಲುಗು ಮತ್ತು ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಕೆ ಬಹುಬೇಡಿಕೆಯ ನಟಿಯೂ ಹೌದು. ಆಕೆ ನಟಿಸಿದ ಮೊದಲ ಚಿತ್ರ ತಮಿಳಿನ ‘ಹೇರಾಮ್’.

ಈಗ ಆಕೆ ವೆಬ್ ಸರಣಿ ಮೂಲಕ ಡಿಜಿಟಲ್ ಜಗತ್ತಿನ ಪ್ರೇಕ್ಷಕರ ಮನ ಸೆಳೆಯಲು ಸಜ್ಜಾಗಿದ್ದಾರೆ. ನೆಟ್‌ಫ್ಲಿಕ್ಸ್ ನಿರ್ಮಿಸಲಿರುವ ಈ ಸರಣಿಯಲ್ಲಿ ಶ್ರುತಿ ಜೊತೆಗೆ ರಾನಾ ದಗ್ಗುಬಾಟಿ ಕೂಡ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಇಬ್ಬರೂ ಪ್ರತಿಭಾನ್ವಿತರು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ಅವರು ನಟಿಸಲಿರುವ ವೆಬ್ ಸರಣಿಯೂ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಶೀಘ್ರವೇ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ತೆಲುಗಿನ ಖ್ಯಾತ ಬರಹಗಾರರೊಬ್ಬರು ಈ ಸರಣಿಗೆ ಕಥೆ ಹೆಣೆಯಲಿದ್ದಾರಂತೆ. ಥ್ರಿಲ್ಲರ್ ಕಥಾನಕ ಇದು. ತೆಲುಗಿನಲ್ಲಿ ಇದು ನಿರ್ಮಾಣವಾಗಲಿದೆ. ಆ ನಂತರ ಭಾರತ ಸೇರಿದಂತೆ ವಿದೇಶದ ಹತ್ತು ಭಾಷೆಗಳಲ್ಲಿ ತೆರೆ ಕಾಣಲಿದೆ.

ರಾನಾ ದಗ್ಗುಬಾಟಿ ಹಿಂದಿ ಮತ್ತು ತಮಿಳಿನಲ್ಲಿ ನಿರ್ಮಾಣವಾಗಲಿರುವ ‘ಹಾಥಿ ಮೇರಾ ಸಾಥಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರುತಿ ಹಾಸನ್ ರವಿ ತೇಜ ನಟನೆಯ ‘ಕ್ರ್ಯಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವ ‘ಲಾಭಂ’ ಚಿತ್ರಕ್ಕೂ ಅವರೇ ನಾಯಕಿ. ಇದಕ್ಕೆ ಎಸ್.ಪಿ. ಜನನಾಥನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಚಿತ್ರದಲ್ಲೂ ಆಕೆ ನಟಿಸುತ್ತಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಈಗ ಇದರಲ್ಲಿ ಆಕೆ ನಟಿಸುವ ಬಗ್ಗೆ ಅನುಮಾನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.