ನಟ ವಿನೋದ್ ಪ್ರಭಾಕರ್ ಎಂದರೆ ಕೇವಲ ಫೈಟ್ಸ್, ನಟಿ ಶ್ರುತಿ ಎಂದರೆ ಕಣ್ಣೀರು ಎಂಬುವುದು ಬದಲಾಗುವುದಕ್ಕೆ ‘ಮಾದೇವ’ ದಾರಿ ಮಾಡಿಕೊಟ್ಟಿದೆ. ತಮ್ಮೊಳಗಿನ ನಟನೆಯ ಸಾಮರ್ಥ್ಯವನ್ನು ಇವರಿಬ್ಬರೂ ಈ ಸಿನಿಮಾದಲ್ಲಿ ಪ್ರದರ್ಶಿಸಿದ್ದು, ಸಾಮಾನ್ಯವಾಗಿ ಕೇಳಿಬರುವ ‘ಭಿನ್ನ ಪಾತ್ರ’ ಎಂಬ ಮಾತಿಗೆ ಸಾಕ್ಷಿಯಾಗಿದೆ. ಕಥೆಯನ್ನು ಕಟ್ಟುತ್ತಾ ನಿರ್ದೇಶಕರು ಸಿದ್ಧಸೂತ್ರಕ್ಕೆ ಅಂಟಿಕೊಂಡಾಗ ಚಿತ್ರಕಥೆ ಎಳೆದಂತೆ ಭಾಸವಾದರೂ ಅದನ್ನು ‘ಮಾದೇವ’ನ ಪಾತ್ರ ಮತ್ತೆ ಹಳಿಗೆ ತಂದು ನಿಲ್ಲಿಸುತ್ತದೆ.

ಅನನುಕ್ರಮಣಿಕೆ(non linear) ಮಾದರಿಯ ಚಿತ್ರಕಥೆಯಲ್ಲಿ ‘ಮಾದೇವ’ನ ಪಾತ್ರವನ್ನು ಇಲ್ಲಿ ತೆರೆದಿಡಲಾಗಿದೆ. ‘ಮಾದೇವ’(ವಿನೋದ್ ಪ್ರಭಾಕರ್) ಅಬ್ಬಲಗೆರೆ ಕೇಂದ್ರ ಕಾರಾಗೃಹದಲ್ಲಿ ಅಪರಾಧಿಗಳನ್ನು ನೇಣುಗಂಬಕ್ಕೇರಿಸುವಾತ. ಭಾವನೆಗಳಿಲ್ಲದ, ಯಾರೊಂದಿಗೂ ಮಾತನಾಡದ, ಮೃಗದ ಲಕ್ಷಣಗಳುಳ್ಳ ಜೀವಂತ ಶವದಂತೆ ಈತನ ಬದುಕು. ಈತ ಯಾವ ಕಾರಣಕ್ಕಾಗಿ ಹೀಗಾದ ಎನ್ನುವುದಕ್ಕೂ ಕಥೆಯೊಳಗೊಂದು ಕಥೆ ಇದೆ. ‘ಮಾದೇವ’ ಕೆಲಸ ಮಾಡುವ ಕಾರಾಗೃಹದಲ್ಲೇ ‘ಪಾರ್ವತಿ’ಯ(ಸೋನಲ್) ತಾಯಿ ಕೈದಿ. ತಾಯಿಗಾಗಿ ‘ಮಾದೇವ’ನನ್ನು ಸಮೀಪಿಸುವ ‘ಪಾರ್ವತಿ’ ಆತನನ್ನು ಮನುಷ್ಯನನ್ನಾಗಿ ಮಾಡುತ್ತಾಳೆ. ಕಥೆ ಮುಂದುವರಿಯುತ್ತಾ ಇದೇ ‘ಮಾದೇವ’ ರಾಕ್ಷಸನಾಗುತ್ತಾನೆ. ಇದು ಚಿತ್ರದ ಸಾರಾಂಶ.

1970–80ರ ದಶಕದ ಕಥೆಯುಳ್ಳ ಈ ಸಿನಿಮಾವನ್ನು ಆ ಮಾದರಿಯ ವಾತಾವರಣದಲ್ಲೇ ಸೆರೆ ಹಿಡಿಯುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಇದಕ್ಕೆ ಚಿತ್ರದ ವಿಎಫ್ಎಕ್ಸ್ ದೃಶ್ಯಗಳು ಸಾಥ್ ನೀಡಿವೆ. ನಾಯಕನಿಗೆ ‘ಹ್ಯಾಂಗ್ಮ್ಯಾನ್’ ಪಾತ್ರ ಬರೆದ ನಿರ್ದೇಶಕರ ಆಲೋಚನೆ ಭಿನ್ನವಾಗಿದೆ. ಕೆಲವೆಡೆ, ಅದರಲ್ಲೂ ಪ್ರಮುಖವಾಗಿ ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಸಿದ್ಧಸೂತ್ರಕ್ಕೆ ಜೋತು ಬಿದ್ದಿದ್ದಾರೆ. ಎರಡು ಸನ್ನಿವೇಶಗಳಲ್ಲಿ ಫೈಟ್ಗಳನ್ನು ಅನಗತ್ಯವಾಗಿ ಎಳೆಯಲಾಗಿದ್ದು, ಇದು ಸಿನಿಮಾ ಅವಧಿಯನ್ನು ಹಿಗ್ಗಿಸಿದೆ. ತಾಳ್ಮೆಯನ್ನೂ ಪರೀಕ್ಷಿಸಿದೆ.

ನಟನೆಯಲ್ಲಿ ‘ಮಾದೇವ’ನಾಗಿ ವಿನೋದ್ ಜೀವಿಸಿದ್ದಾರೆ. ಫೈಟ್ಗಳ ಸುತ್ತ ಕಟ್ಟಿದ ಕಥೆಯೊಳಗೆ ಕಳೆದು ಹೋಗುತ್ತಿದ್ದ ವಿನೋದ್ ಈ ಸಿನಿಮಾ ಮೂಲಕ ನಟನೆಯ ಗತ್ತು ಪ್ರದರ್ಶಿಸಿದ್ದಾರೆ. ಭಾವನೆಗಳ ಮಿಶ್ರಣದಲ್ಲಿ ಮಿಂದಿದ್ದಾರೆ. ಇಡೀ ಸಿನಿಮಾದಲ್ಲಿ ಅವರಿಗೆ ಒಟ್ಟು ನಾಲ್ಕೈದು ನಿಮಿಷದ ಸಂಭಾಷಣೆಯಿದೆ. ಹೀಗಿದ್ದರೂ ಕಣ್ಣಿನಲ್ಲಿ, ತಮ್ಮ ಹಾವಭಾವದಲ್ಲೇ ನಟಿಸುತ್ತಾ ಹೊಸ ಅವತಾರದಲ್ಲಿ ಬಂದಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಅಂಕ ಗಿಟ್ಟಿಸುತ್ತಾರೆ. ಕ್ಲೈಮ್ಯಾಕ್ಸ್ ತಲುಪುತ್ತಾ ‘ಮಾದೇವ’ ರಾಕ್ಷಸನಾಗುವ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಚೆನ್ನಾಗಿದೆ.

‘ಭಂಜರಂಗಿ–2’ ಸಿನಿಮಾದಲ್ಲಿ ತಮ್ಮ ಶೈಲಿಯಲ್ಲದ ಪಾತ್ರವನ್ನು ಶ್ರುತಿ ಅವರು ನಿಭಾಯಿಸಿದ್ದರು. ‘ಮಾದೇವ’ ಸಿನಿಮಾದಲ್ಲೂ ಹೊಸ ಶೈಲಿಯ ಪಾತ್ರವೊಂದು ಅವರಿದೆ ದಕ್ಕಿದೆ. ಇದನ್ನು ಅವರು ಸದ್ಬಳಕೆ ಮಾಡಿಕೊಂಡಿದ್ದಾರೆ. ಖಳನಾಯಕನಾಗಿ ಕಾಣಿಸಿಕೊಂಡ ಶ್ರೀನಗರ ಕಿಟ್ಟಿ ಅವರ ಪಾತ್ರದ ಬರವಣಿಗೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು. ಸೋನಲ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ‘ರಾಬರ್ಟ್’ ಜೋಡಿಯು ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದೆ. ‘ಎದೇಲಿ ತಂಗಾಳಿ’ ಹಾಡು ಚೆನ್ನಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.