ಶುಕ್ರವಾರ, ಮೇ 27, 2022
23 °C

ಹುಟ್ಟುಹಬ್ಬದ ಸಂಭ್ರಮದಲ್ಲಿ ಪೂಜಾ ಬೇಡಿ ಪುತ್ರಿ ಅಲಾಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Alaya F Instagram Post

ಬೆಂಗಳೂರು: ಬಾಲಿವುಡ್‌ನ ಹೊಸ ಪ್ರತಿಭೆಗಳಲ್ಲಿ ಒಬ್ಬರಾದ ಅಲಾಯ ಫರ್ನಿಚರ್‌ವಾಲಾ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಖ್ಯಾತ ನಟ ಕಬೀರ್ ಬೇಡಿ ಅವರ ಮೊಮ್ಮಗಳು ಮತ್ತು ನಟಿ ಪೂಜಾ ಬೇಡಿ ಪುತ್ರಿ ಅಲಾಯ ಎಫ್. 2020ರಲ್ಲಿ ಜವಾನಿ ಜಾನೇಮನ್ ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದರು.

ಜತೆಗೆ ಮೊದಲ ಚಿತ್ರಕ್ಕೇ ಫಿಲಂಫೇರ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿರುವ ಅಲಾಯ ಎಫ್. ಅಜ್ಜಿ ಪ್ರೊತಿಮಾ ಬೇಡಿ ಅವರಂತೆಯೇ ಡ್ಯಾನ್ಸ್‌ನಲ್ಲೂ ಪಳಗಿದ್ದಾರೆ.

ಯೂ ಟರ್ನ್ ಮತ್ತು ಫ್ರೆಡ್ಡಿ ಎಂಬ ಎರಡು ಚಿತ್ರಗಳಲ್ಲೂ ಅಲಾಯ ಕಾಣಿಸಿಕೊಳ್ಳುತ್ತಿದ್ದು, 2022ರಲ್ಲಿ ತೆರೆಕಾಣುವ ನಿರೀಕ್ಷೆಯಿದೆ. ಅಲ್ಲದೆ ಆಜ್ ಸಜೇಯ ಎಂಬ ಮ್ಯೂಸಿಕ್ ವಿಡಿಯೊದಲ್ಲಿ ಅಲಾಯ ಇದ್ದಾರೆ.

 

ಹುಟ್ಟುಹಬ್ಬದಲ್ಲಿ ಕೇಕ್ ಕತ್ತರಿಸುತ್ತಿರುವ ವಿಡಿಯೊ ಒಂದನ್ನು ಅಲಾಯ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲಾಯ ಗೆಳೆಯರು ಕಾಮೆಂಟ್ ಮೂಲಕ ಬರ್ತ್‌ಡೇ ಶುಭಾಶಯ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು