ಗುರುವಾರ , ಅಕ್ಟೋಬರ್ 6, 2022
27 °C

ಕಾಫಿ ನಾಡು ಚಂದು ‘ಬಿಗ್‌ಬಾಸ್‌‘ ಮನೆಗೆ ಹೋಗಬೇಕು: ಅಭಿಯಾನ ಶುರು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿರುವ ಕಾಫಿ ನಾಡು ಚಂದು ‘ಬಿಗ್‌ಬಾಸ್‌‘ ಮನೆಗೆ ಹೋಗಬೇಕು ಎಂದು ಅಭಿಯಾನ ಶುರುವಾಗಿದೆ. 

‘ನಾನು ಶಿವಣ್ಣ...ಪುನೀತಣ್ಣ ಅವರ ಅಭಿಮಾನಿ...’ ಎಂದು ಹೇಳಿ ನಮಸ್ಕಾರ ಮಾಡುವ, ಜನರಿಗೆ ಜನ್ಮದಿನಕ್ಕೆ ಹಾಡು ಹೇಳುವ ಮೂಲಕ ಕಾಫಿ ನಾಡು ಚಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂ‍ಪಾದಿಸಿದ್ದಾರೆ. 

ಸದ್ಯ ಅವರು ‘ಬಿಗ್‌ಬಾಸ್‌‘ ಮನೆಗೆ ಹೋಗಬೇಕು ಎಂಬುದು ಅವರ ಬೆಂಬಲಿಗರ ಒತ್ತಾಸೆಯಾಗಿದೆ. ಇದಕ್ಕೆ ‘ಕಾಫಿನಾಡು‘ ಚಂದು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಫಿ ನಾಡು ಚಂದು ಅವರು ‘ವೈಲ್ಡ್‌ ಕಾರ್ಡ್‌‘ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಮಾಡಬೇಕು ಎಂದು ಬೆಂಬಲಿಗರು ವಿಡಿಯೊ ಮೂಲಕ ಅಭಿಯಾನ ಶುರು ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳನ್ನು ಪ್ರಕಟಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು