ಭಾನುವಾರ, ಮೇ 29, 2022
21 °C

ವರ್ಷಾಂತ್ಯದ ಪಾರ್ಟಿಗೆ ಬೀಚ್‌ಗೆ ತೆರಳಿದ ಬಾಲಿವುಡ್ ನಟಿ ದಿಶಾ ಪಟಾನಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Disha Patani Instagram

ಬೆಂಗಳೂರು: ಬಾಲಿವುಡ್ ನಟಿ ದಿಶಾ ಪಟಾನಿ ಅವರು ವರ್ಷಾಂತ್ಯದ ಪ್ರವಾಸಕ್ಕೆ ತೆರಳಿದ್ದಾರೆ. ಅವರ ಜತೆ ಗೆಳೆಯ ಟೈಗರ್ ಶ್ರಾಫ್ ಕೂಡ ಇದ್ದಾರೆ ಎನ್ನಲಾಗಿದೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸದ ಫೋಟೊ ಹಂಚಿಕೊಂಡಿರುವ ಅವರು ಸ್ಟೋರೀಸ್‌ನಲ್ಲಿ ಕೂಡ ಬೀಚ್‌ನ ಸೂರ್ಯಾಸ್ತದ ಸುಂದರ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ.

ಬೀಚ್ ಮತ್ತು ಬಿಕಿನಿ ಎನ್ನುವುದು ದಿಶಾ ಪಟಾನಿ ಅವರ ಫೇವರಿಟ್ ಎನ್ನುವುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಅದಕ್ಕೆ ಪೂರಕವಾಗಿ ಅವರು ಪೋಸ್ಟ್ ಮಾಡಿರುವ ಫೋಟೊಗೆ ಐದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ಮತ್ತೊಂದೆಡೆ ಟೈಗರ್ ಶ್ರಾಫ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ಅವರು ಬೀಚ್‌ನಲ್ಲಿ ಓಡಾಡುತ್ತಿರುವ ದೃಶ್ಯವಿದೆ.

ಹೀಗಾಗಿ ದಿಶಾ ಮತ್ತು ಶ್ರಾಫ್ ಇಬ್ಬರೂ ಜತೆಯಾಗಿಯೇ ವರ್ಷಾಂತ್ಯದ ಪಾರ್ಟಿಗೆ ಬೀಚ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು