ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೋಂಟ್ ಬ್ಲೇಮ್ ಬೆಂಗಳೂರು’: ಬೆಂಗಳೂರಿಗೆ ಬೈಬೇಡಿ ಅಂದ್ರು ಈ ಹಾಡಿನಲ್ಲಿ

ಬೆಂಗಳೂರಿಗೆ ಬೈಬೇಡಿ ಅಂದ್ರು ಈ ಹಾಡಿನಲ್ಲಿ
Last Updated 8 ಜೂನ್ 2021, 9:14 IST
ಅಕ್ಷರ ಗಾತ್ರ

ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ವಾಪಸ್‌ ಹೋಗುವ ಮಂದಿ ರಾಜಧಾನಿಯನ್ನು ಬೈದು ಹೋಗುತ್ತಿರುವುದಕ್ಕೆ ಬೇಸರಿಸಿಕೊಂಡಿದೆ ಯುವ ಸಾಹಿತಿ ತಿಮ್ಮೇಗೌಡ ಮತ್ತು ಅವರ ತಂಡ.

ಈ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಊರಿನ ಮಾತೃ ಹೃದಯ ಎಂತಹದ್ದು ಎಂದು ತಿಳಿಸುವ ನಿಟ್ಟಿನಲ್ಲಿ ಈ ತಂಡ ಬೆಂಗಳೂರಿನ ಹಿರಿಮೆ ಸಾರುವ ಕುರಿತು ‘ಡೋಂಟ್ ಬ್ಲೇಮ್ ಬೆಂಗಳೂರು’ ಎಂಬ ವಿಡಿಯೋ ಹಾಡನ್ನು ನಿರ್ಮಿಸಿ, ಜೂನ್‌ 5ರಂದು ಮೈಸೂರಿನ ಆರ್.ಜೆ. ಸುನಿಲ್ ಪ್ರಾಂಕ್ ಕಾಲ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ.

ಬಹುತೇಕರು ತಮ್ಮ ಗ್ರಾಮಗಳಲ್ಲಿ ಕೆಲಸವಿಲ್ಲದೆ ಪರದಾಡುವಾಗ, ಅವಮಾನಿತರಾದಾಗ ಎಲ್ಲಿಗೆ ಹೋಗುವುದು ಎಂದು ಯೋಚಿಸುವಾಗ ಥಟ್ಟನೇ ತಲೆಗೆ ಬರುವುದು ಬೆಂಗಳೂರು. ನಾನಾ ಕನಸುಗಳೊಂದಿಗೆ, ಕಷ್ಟಗಳೊಂದಿಗೆ ಊರು ಬಿಟ್ಟು ಬಂದವರಿಗೆ ಯಾವುದೇ ಭೇದವಿಲ್ಲದೆ. ಅನ್ನ, ಉದ್ಯೋಗ, ಸೂರು ನೀಡಿ ತನ್ನ ಒಡಲಿನಲ್ಲಿ ಅಪ್ಪಿಕೊಳ್ಳುವ ಈ ಊರೀಗ ಕಡೆಗಣೆನೆಗೆ ಒಳಗಾಗಿದೆ ಎಂಬುದು ತಿಮ್ಮೇಗೌಡರ ಬೇಸರ.

ಈ ಊರಿನಲ್ಲಿ ಸುಖವಾಗಿದ್ದ ಜನ, ಕಷ್ಟ ಬಂದಿದೆ ಎಂದು ಅನ್ನ, ಸೂರು ಕೊಟ್ಟ ಊರನ್ನು ಜರಿಯುವುದಾದರೂ ಎಷ್ಟು ಸರಿ? ಎಂದು ಪ್ರಶ್ನಿಸುತ್ತಾರೆ ಅವರು.

ವಿಡಿಯೊ ಹಾಡಿನ ಪರಿಕಲ್ಪನೆ, ಸಾಹಿತ್ಯ, ಸಂಗೀತ ತಿಮ್ಮೇಗೌಡರದ್ದು. ಅಶ್ವಿನ್ ಶರ್ಮಾಹಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಅಭಿಷೇಕ್, ಎಡಿಟಿಂಗ್‌ನಲ್ಲಿ ಕಿರಣ್, ನಿರ್ಮಾಣ ವಿನ್ಯಾಸಕಾರರಾಗಿ ಮಮತಾ ಮರ್ಧಾಳಅವರು ಕೆಲಸ ಮಾಡಿದ್ದಾರೆ.

ಈ ವಿಡಿಯೋ ಹಾಡನ್ನು ಅನ್ನು ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್, ನಟರಾದ ಮಂಡ್ಯ ರಮೇಶ್, ಅನಿರುದ್ಧ, ವಸಿಷ್ಠ ಸಿಂಹ, ಗಾಯಕಿಯರಾದ ಅನುರಾಧಾ ಭಟ್, ಶಮಿಕಾ ಮಲ್ನಾಡ್, ನಟಿಯರಾದ ಹರ್ಷಿಕ ಪೂಣಚ್ಚ, ಪ್ರಣೀತಾ ಸುಭಾಷ್ ಸೋನುಗೌಡ, ರೂಪಿಕಾ ಸೇರಿದಂತೆ ಅನೇಕ ಪ್ರಮುಖರು ಬೆಂಬಲಿಸಿದ್ದಾರೆ ಎಂದಿದ್ದಾರೆ ತಿಮ್ಮೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT