ಶುಕ್ರವಾರ, ಮೇ 27, 2022
23 °C

ಕೊನೆಗೂ ಕತ್ರೀನಾ ಮೆಹಂದಿಯಲ್ಲಿ ವಿಕ್ಕಿ ಹೆಸರು ಹುಡುಕಿದ ಅಭಿಮಾನಿಗಳು!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

katrina kaif instagram

ಬೆಂಗಳೂರು: ನವದಂಪತಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಬಳಿಕ ಮುಂಬೈನ ಹೊಸಮನೆಗೆ ಸ್ಥಳಾಂತರವಾಗಿದ್ದಾರೆ.

ಈ ಜೋಡಿಯ ಕುರಿತು ಸಾಮಾಜಿಕ ತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಲೇ ಇವೆ.

ಕತ್ರೀನಾ ಕೈಫ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೆಹಂದಿ ಫೋಟೊ ಹಂಚಿಕೊಂಡಿದ್ದರು.

ಅದರಲ್ಲಿ ವಿಕ್ಕಿ ಕೌಶಲ್ ಹೆಸರು ಇರಬಹುದು ಎಂದು ಅಭಿಮಾನಿಗಳು ಹುಡುಕಾಟ ನಡೆಸಿದ್ದರು. ಅಲ್ಲದೆ, ಬಹಳಷ್ಟು ಮಂದಿ ಕಾಮೆಂಟ್ ಮಾಡಿ, ಅದರಲ್ಲಿ ವಿಕ್ಕಿ ಹೆಸರು ಎಲ್ಲಿದೆ ಎಂದು ಪ್ರಶ್ನಿಸಿದ್ದರು.

ಕೊನೆಗೂ ಅಭಿಮಾನಿಗಳು ಕತ್ರೀನಾ ಅವರ ಮೆಹಂದಿಯಲ್ಲಿ ವಿಕ್ಕಿ ಹೆಸರು ಹುಡುಕಿದ್ದಾರೆ.

ಬಲಗೈನ ಉಂಗುರ ಬೆರಳಿನಲ್ಲಿ ಚಿಕ್ಕದಾಗಿ ವಿಕ್ಕಿ ಹೆಸರಿನ ಅಕ್ಷರಗಳನ್ನು ಮೆಹಂದಿಯಲ್ಲಿ ಮೂಡಿಸಲಾಗಿದೆ.

ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು