ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್ಡೀವ್ಸ್ ಕಡಲ ತೀರದಲ್ಲಿ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

ಬೆಂಗಳೂರು: 2017ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾನುಷಿ ಚಿಲ್ಲರ್, ಮಾಲ್ಡೀವ್ಸ್‌ ಕಡಲ ತೀರದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಡೆಲಿಂಗ್ ವೃತ್ತಿಯಲ್ಲಿರುವ ಮಾನುಷಿ ಚಿಲ್ಲರ್, ಪ್ರವಾಸದ ಕ್ಷಣಗಳನ್ನು ಸೆರೆಹಿಡಿದಿದ್ದು, ಮಾಲ್ಡೀವ್ಸ್‌ನಲ್ಲಿ ಸುಂದರ ಸಂಜೆಯನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ.

ಇಂಟರ್‌ಕಾಂಟಿನೆಂಟಲ್ ಮಾಲ್ಡೀವ್ಸ್‌ ಮಾಮುನಗವ್ ರೆಸಾರ್ಟ್‌ನಲ್ಲಿ ಮಾನುಷಿ ತಂಗಿದ್ದಾರೆ.

ಜತೆಗೆ, ಫ್ರಾನ್ಸ್‌ನ ಪ್ಯಾರಿಸ್‌ಗೂ ತೆರಳಿದ್ದು, ಪ್ರಸಿದ್ಧ ಐಫೆಲ್ ಟವರ್ ಬಳಿ ತೆಗೆಸಿಕೊಂಡ ಫೋಟೊಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್ ತೆರವಿನ ಬಳಿಕ ಮಾಲ್ಡೀವ್ಸ್ ಹಾಗೂ ವಿವಿಧ ತಾಣಗಳಿಗೆ ಪ್ರವಾಸ ತೆರಳುತ್ತಿದ್ದು, ತಮ್ಮ ಸಾಮಾಜಿಕ ತಾಣಗಳಲ್ಲಿ ಫೋಟೊ ಮತ್ತು ವಿಡಿಯೊ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT