ಮಂಗಳವಾರ, ಮಾರ್ಚ್ 21, 2023
20 °C

ಮಗಳ ಹುಟ್ಟುಹಬ್ಬ‌ಕ್ಕೆ ಶುಭಕೋರಿದ ಗೋಲ್ಡನ್ ಸ್ಟಾರ್ ಗಣೇಶ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

GANESH INSTA POST SC

ಬೆಂಗಳೂರು: ಚಂದನವನದಲ್ಲಿ ಗೋಲ್ಡನ್ ಸ್ಟಾರ್ ಎಂದೇ ಹೆಸರು ಗಳಿಸಿರುವ ನಟ ಗಣೇಶ್, ಕಿರುತೆರೆ ಮೂಲಕ ಜನರಿಗೆ ಪರಿಚಯವಾದವರು..

ಭಾನುವಾರ ಅವರು ಮಗಳು ಚಾರಿತ್ರ್ಯ ಹುಟ್ಟುಹಬ್ಬವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಮಗಳ ಜತೆಗಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ‘Happy birthday ಮಗಳೆ‘ ಎಂದು ಶುಭಕೋರಿದ್ದಾರೆ.

ಗಣೇಶ್ ಮತ್ತು ಶಿಲ್ಪಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 

ಗಣೇಶ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಮಗಳ ಹುಟ್ಟುಹಬ್ಬಕ್ಕೆ ಕಾಮೆಂಟ್ ಮೂಲಕ ಶುಭಹಾರೈಸಿದ್ದಾರೆ.

ಉದಯ ಟಿವಿಯ ಕಾಮಿಡಿ ಟೈಮ್ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಗಣೇಶ್, 2006ರಲ್ಲಿ ಬಿಡುಗಡೆಯಾದ ‘ಮುಂಗಾರು ಮಳೆ‘ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು.

ಗಣೇಶ್, ಚೆಲುವಿನ ಚಿತ್ತಾರ, ಗಾಳಿಪಟದಂತಹ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು