ಶುಕ್ರವಾರ, ಸೆಪ್ಟೆಂಬರ್ 17, 2021
30 °C

ದ್ವಿಭಾಷೆಯಲ್ಲಿ ಕಾರ್ಗಲ್‌ ನೈಟ್ಸ್ ವೆಬ್‌ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1995ರ ಅವಧಿಯಲ್ಲಿ ಮಲೆನಾಡು ಸುತ್ತಮುತ್ತ ನಡೆದ ನೈಜ ಘಟನೆಗಳ ಎಳೆಯಾಗಿಟ್ಟುಕೊಂಡು ನಿರ್ದೇಶಕ ದೇವರಾಜ್ ಪೂಜಾರಿ ‘ಕಾರ್ಗಲ್ ನೈಟ್ಸ್’ ವೆಬ್‌ ಸರಣಿ ನಿರ್ದೇಶಿಸಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ಈ ವೆಬ್‌ಸರಣಿ ಸದ್ಯದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಲಾಕ್‍ಡೌನ್‍ಗೂ ಮೊದಲೇ ಶೂಟಿಂಗ್ ಮುಗಿಸಿದ್ದ ಈ ವೆಬ್ ಸರಣಿಯ ಚಿತ್ರೀಕರಣೋತ್ತರ ಕೆಲಸಗಳು ಇತ್ತೀಚೆಗಷ್ಟೇ ಪೂರ್ಣಗೊಂಡಿವೆ. 

ಯಶಸ್ ಪ್ರೊಡಕ್ಷನ್ ಬ್ಯಾನರ್‌ನಡಿ ಎನ್.ಮಂಜುನಾಥ್ ಮತ್ತು ಜೆ.ಎನ್.ಪ್ರದೀಪ್ ಜಂಟಿಯಾಗಿ ‘ಕಾರ್ಗಲ್ ನೈಟ್ಸ್’ ನಿರ್ಮಿಸಿದ್ದಾರೆ. ಈ ಹಿಂದೆ ‘ಕಿನಾರೆ’ ಸಿನಿಮಾ ಮಾಡಿದ ಅನುಭವವಿರುವ ದೇವರಾಜ್, ಈ ವೆಬ್‌ ಸರಣಿಯನ್ನು ಸಿನಿಮಾ ಶೈಲಿಯಲ್ಲೇ ನಿರ್ಮಿಸಿದ್ದಾರೆ. ರೆಟ್ರೋ ಕ್ರೈಂ-ಥ್ರಿಲ್ಲರ್ ಕಥಾಹಂದರವಿರುವ ಈ ವೆಬ್ ಸರಣಿಗೆ ಸಿಂಕ್ ಸೌಂಡ್‍ ಸ್ಪರ್ಶ ಕೊಡಲಾಗಿದೆ.

ಹರ್ಷಿಲ್ ಕೌಶಿಕ್, ಅಕ್ಷತಾ ಅಶೋಕ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಂದೀಪ್ ನಾಗರಾಜ್, ನಾಗರಾಜ್ ಬೈಂದೂರ್, ಅರ್ಚನಾ ಮೊಸಳೆ, ಸುಚನ್ ಶೆಟ್ಟಿ ಹಾಗೂ ಚಂದ್ರಕಾಂತ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವಮೊಗ್ಗ, ಸಾಗರ, ಜೋಗ್‍ಫಾಲ್ಸ್ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಹಣ ಮತ್ತು ಸಂಕಲನ ಎ.ಎನ್‍.ಆರ್. ಅರುಣ್, ಸಂಗೀತ ಸಂಯೋಜನೆ ಬಿ.ಆರ್.ಸುರೇಂದ್ರನಾಥ್ ಅವರದು.

‘ನಿರ್ಮಾಣ ಹಂತದಲ್ಲಿರುವಾಗಲೇ ಒಟಿಟಿ ಪ್ಲಾಟ್‍ಫಾರ್ಮ್‍ಗಳಿಂದ ಸಾಕಷ್ಟು ಬೇಡಿಕೆ ಬಂದಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದ ನಂತರವಷ್ಟೇ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಮೊದಲಿಗೆ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಿ, ಮುಂಬರುವ ದಿನಗಳಲ್ಲಿ ತಮಿಳು ಹಾಗೂ ತೆಲುಗಿಗೂ ಡಬ್ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕ ದೇವರಾಜ್ ಪೂಜಾರಿ‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು