ಹಸಿರು ಚಪ್ಪರದಡಿ ನಮ್ ಮದ್ವೆ!

4

ಹಸಿರು ಚಪ್ಪರದಡಿ ನಮ್ ಮದ್ವೆ!

Published:
Updated:

ಇತ್ತಿಚಿಗೆ ನನಗೂ ನನ್ನ ಸ್ನೇಹಿತನಿಗೂ ಮದುವೆಯ ವಿಷಯ ಕುರಿತು ಚರ್ಚೆ ನಡೆದಿತ್ತು. ಅವನು 30 ವರ್ಷ ವಯಸ್ಸಿನ ಒಳಗೆ ಮದುವೆ ಆಗುತ್ತೇನೆಂದು  ನಾನು 35 ವರ್ಷಕ್ಕೆ ಆಗುತ್ತೇನೆ ಎಂಬ ವಾದ ನಮ್ಮಿಬ್ಬರ ಮಧ್ಯೆ ನಡೆದಿತ್ತು. ನಾನಂತೂ ಮೊದಲೇ ಹೇಳಿದಂತೆ 35 ವರ್ಷ ನಂತರವೇ ಮದುವೆ ಆಗುವುದು. ಅದೂ ಕೂಡಾ ಮನೆಯ ಮುಂದೆ ಚಪ್ಪರ ಹಾಕಿಸಿಕೊಂಡು ಮದುವೆಯಾಗಬೇಕು ಎಂದು ಕೊಂಡಿದ್ದೇನೆ. ನನ್ನಾಕೆ ಒಪ್ಪದಿದ್ದಲ್ಲಿ ಹೇಗಾದರೂ ಮಾಡಿ ಒಪ್ಪಿಸುತ್ತೇನೆ. 

ಮನೆಯ ಮುಂದೆ ಚಪ್ಪರ ಹಾಕಿಸಿಕೊಂಡು, ಸಿಂಪಲ್ಲಾಗಿ ತಳಿರು ತೋರಣ, ಗುಲ್‌ಮೊಹರ್‌ ಹೂವಿನ ಕೊಂಬೆಗಳು. ಎಳೆನೀರು, ಮಾವಿನ ಚಿಗುರು ಎಲೆ, ಬಾಳೆಕಂಬದ ಚಪ್ಪರದ ಅಡಿಯಲ್ಲಿ ಧಾರೆ ಕಂಬ ಮತ್ತು ನಾವಿಬ್ಬರು. ನಮ್ಮ ಸುತ್ತ ಮುತ್ತ ಊರಿನ ಪ್ರಜೆಗಳು, ಬಂಧು ಬಾಂಧವರು. ನಿಂತು ಧಾರೆ ಮಾಡಬೇಕು. ನಂತರ ಸಿಹಿಯಾದ– ರುಚಿಯಾದ ಊಟ ಸವೆದು ನಮ್ಮನ್ನು  ಹರಸಬೇಕು. ಇದೆ ನ್ನ ಪುಟ್ಟ ಮದುವೆಯ ಕನಸು. ಇದೆಲ್ಲಾ ಸಾಕಾರಗೊಳ್ಳಲು ಅಥವಾ ಅಚ್ಚುಕಟ್ಟಾಗಿ ಸಾಗಲು ವರುಣ ದೇವ 2 ದಿನಗಳ ರಜೆ ತೆಗೆದುಕೊಂಡರೆ ಚೆನ್ನಾ! (ಮಳೆಗಾಲವಿದ್ದಲ್ಲಿ)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !