ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬುದು ಕೊನೆಗೂ ಬಹಿರಂಗ

Last Updated 16 ಸೆಪ್ಟೆಂಬರ್ 2021, 14:40 IST
ಅಕ್ಷರ ಗಾತ್ರ

ಕೋಲ್ಕತ್ತ:ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗುವಿನ ತಂದೆ ಯಾರು? ಎಂಬುದು ಬಹಿರಂಗಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನುಸ್ರತ್ ಜಹಾನ್ ಮಗುವಿನ ಜನನ ಮಾಹಿತಿಯ ಆಧಾರದ ಮೇಲೆಅನೇಕ ಸುದ್ದಿ ಸಂಸ್ಥೆಗಳು ಸುದ್ದಿ ಪ್ರಕಟಿಸಿವೆ.

ಕಳೆದ ಸೆ. 26 ರಂದು ನುಸ್ರತ್ ಜಹಾನ್ ಕೋಲ್ಕತ್ತದ ಭಾಗಿರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಕೋಲ್ಕತ್ತ ಮಹಾನಗರ ಪಾಲಿಕೆಯ ದಾಖಲಾತಿಯಲ್ಲಿರುವ ಸುಸ್ರತ್ ಮಗುವಿನ ಜನನದ ಮಾಹಿತಿಯಲ್ಲಿ ಮಗುವಿನ ಹೆಸರು ಯಶಾನ್ ಹಾಗೂ ತಂದೆ ಹೆಸರು ದೇಬಾಸಿಸ್ ದಾಸ್‌ ಗುಪ್ತಾ (ಯಶ್‌ ದಾಸ್‌ ಗುಪ್ತಾ) ಎಂದು ಉಲ್ಲೇಖಿಸಿರುವುದು ತಿಳಿದು ಬಂದಿದೆ. ಸದ್ಯ ನುಸ್ರತ್ ಅವರು ನಟ ಯಶ್ ದಾಸ್‌ಗುಪ್ತಾ ಜೊತೆ ಡೇಟಿಂಗ್‌ನಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನುಸ್ರತ್ ಮಗುವಿನ ಜನನ ಮಾಹಿತಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನುಸ್ರತ್ ಮಗುವಿನ ಜನನ ಮಾಹಿತಿ

ನುಸ್ರತ್ ಜಹಾನ್ ಹಾಗೂ ಟರ್ಕಿಯಲ್ಲಿರುವ ಉದ್ಯಮಿ ನಿಖಿಲ್ ಜೈನ್ ಅವರ ವೈವಾಹಿಕ ಸಂಬಂಧ ಅಂತ್ಯವಾದ ಬಳಿಕ ನುಸ್ರತ್ ಅವರ ಹೆಸರು ಯಶ್ ದಾಸ್ ಗುಪ್ತಾ ಜೊತೆ ಗುರುತಿಸಿಕೊಂಡಿತ್ತು. ಅಲ್ಲದೇ ಈ ನಡುವೆಯೇ ಅವರು ಗರ್ಭಿಣಿಯಾದರು. ಗರ್ಭಿಣಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನುಸ್ರತ್ ಮಗುವಿನ ನಿಜವಾದ ತಂದೆ ಯಾರು? ಎಂದು ಅನೇಕರು ಪ್ರಶ್ನೆ ಕೇಳುತ್ತಿದ್ದರು. ಮಾಧ್ಯಮಗಳಿಂದಲೂ ನುಸ್ರತ್ ಪ್ರಶ್ನೆ ಎದುರಿಸಬೇಕಾಗಿತ್ತು. ಆದರೆ, ಅವರು ಮಾತ್ರ ಗುಟ್ಟು ಕಾಪಾಡಿಕೊಂಡಿದ್ದರು. ಯಾರಿಗೂ ಈ ಬಗ್ಗೆ ಉತ್ತರಿಸಲು ಹೋಗಿರಲಿಲ್ಲ.

ಯಶ್ ದಾಸ್ ಗುಪ್ತಾ ಜೊತೆ ನುಸ್ರತ್ ಜಹಾನ್
ಯಶ್ ದಾಸ್ ಗುಪ್ತಾ ಜೊತೆ ನುಸ್ರತ್ ಜಹಾನ್

2019 ರಲ್ಲಿ ನಿಖಿಲ್ ಜೈನ್ ಅವರನ್ನು ನುಸ್ರತ್ ಟರ್ಕಿಯಲ್ಲಿ ವಿವಾಹವಾಗಿದ್ದರು ಎನ್ನಲಾಗಿತ್ತು. ಆದರೆ, ಇದು ಭಾರತೀಯ ಕಾನೂನು ಪ್ರಕಾರ ಮಾನ್ಯವಾದುದಲ್ಲ, ಅದೊಂದು ಲಿವ್‌ಇನ್ ರಿಲೇಶನ್‌ಶಿಪ್ ಎಂದು ಹೇಳಿ ನುಸ್ರತ್ ಕೈ ತೊಳೆದುಕೊಂಡಿದ್ದರು.

ಮಗುವಿಗೆ ಜನ್ಮ ನೀಡಿದ ಬಳಿಕ ಸೆ 9 ರಂದು ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರಿಗೆ ಮೊದಲು ಎದುರಾಗಿದ್ದ ಪ್ರಶ್ನೆಯೇ ತಮ್ಮ ಮಗುವಿನ ತಂದೆ ಯಾರು? ಎಂದು. ಈ ಬಗ್ಗೆ ಸಿಡುಕಿನಿಂದಲೇ ಉತ್ತರಿಸಿದ್ದ ಅವರು, ‘ನನ್ನ ಮಗುವಿನ ತಂದೆ ಯಾರು ಎಂಬುದು ಆ ತಂದೆಗೆ ಅಷ್ಟೇ ಗೊತ್ತು‘ ಎಂದು ಹೇಳಿದ್ದರು.

‘ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಒಂದು ಮಹಿಳೆಗೆ ಮಾಡುವ ಅವಮಾನ ಎಂದಿದ್ದ ಅವರು, ನಾನು ಹಾಗೂ ಯಶ್ ದಾಸ್ ಗುಪ್ತಾ ಮಗುವಿನ ಜೊತೆ ಖುಷಿಯಾಗಿದ್ದೇವೆ‘ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT