ಸೋಮವಾರ, ಆಗಸ್ಟ್ 8, 2022
24 °C

ಜಗತ್ತಿನ ಅತಿ ಸುಂದರ ಮಗು– ಪ್ರಿಯಾಂಕಾ ಮಗಳಿಗೆ ಪರಿಣಿತಿ ಚೋಪ್ರಾ ಪ್ರಶಂಸೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಜನವರಿಯಲ್ಲಿ ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದಾರೆ.

ಮಗಳಿಗೆ ‘ಮಾಲತಿ ಮೇರಿ ಚೋಪ್ರಾ ಜೋನಾಸ್‘ ಎಂದು ನಾಮಕರಣ ಮಾಡಿದ್ದು, ಮೇ ತಿಂಗಳಿನಲ್ಲಿ ಮಗುವಿನ ಬಗ್ಗೆ ಪ್ರಿಯಾಂಕಾ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

ಪ್ರಿಯಾಂಕಾ ಚೋಪ್ರಾ ಸಂಬಂಧಿ ಪರಿಣಿತಿ ಚೋಪ್ರಾ ಅವರು ಮಗುವನ್ನು ನೋಡಲು ಹೋಗಿದ್ದರು. ನಂತರ ಮಗುವಿನ ಬಗ್ಗೆ, ‘ಜಗತ್ತಿನ ಅತಿ ಸುಂದರ ಮಗು‘ ಎಂದು ಹೊಗಳಿದ್ದಾರೆ.

ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಿಣಿತಿ ಚೋಪ್ರಾ, ಆಕೆ ಅತ್ಯಂತ ಸುಂದರವಾಗಿದ್ದಾಳೆ, ಈಗ ಆರೋಗ್ಯವಾಗಿದ್ದಾಳೆ. ನನ್ನ ಪುಟ್ಟ ಮಗು ಅವಳು. ಜಗತ್ತಿನ ಅತಿ ಸುಂದರ ಮಗು.. ಎಂದು ಅತ್ಯಂತ ಭಾವನಾತ್ಮಕವಾಗಿ ಮಗುವಿನ ಬಗ್ಗೆ ವರ್ಣಿಸಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಮಗುವಿನ ಮುಖವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೆ ಮಗು, ಈಗಾಗಲೇ ಸೆಲೆಬ್ರಿಟಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು