ಸೋಮವಾರ, ಆಗಸ್ಟ್ 8, 2022
22 °C
ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್

ವಿಡಿಯೊ ನೋಡಿ: ಈಜುಕೊಳದಲ್ಲಿ ವರ್ಕ್‌ಔಟ್‌ ಮಾಡಿದ ಚೆಲುವೆ ರಾಧಿಕಾ ಮದನ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ರಾಧಿಕಾ ಮದನ್, ಚಿತ್ರ ಕೃಪೆ–ಇನ್ಸ್ಟಾಗ್ರಾಮ್

ಬೆಂಗಳೂರು; ವ್ಯಾಯಾಮ ಮಾಡುವುದು ಹಲವರಿಗೆ ದುಸ್ತರ. ಇನ್ನು ಕೆಲವರು ಪ್ರತಿದಿನ ವ್ಯಾಯಾಮ, ಯೋಗಾಸನ ಮಾಡಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿರುತ್ತಾರೆ. ಅದರಲ್ಲೂ ನಟಿಯರಂತೂ ಈ ವಿಷಯದಲ್ಲಿ ಒಂದು ಕೈ ಮೇಲು.

ನಿಯಮಿತ ವ್ಯಾಯಾಮ, ಯೋಗಾಸನ ಮತ್ತು ಡಯಟ್ ಮಾಡುತ್ತಾ ಆಕರ್ಷವಾಗಿ ಕಾಣಲು ನಟಿಮಣಿಯರು ನಿರಂತರ ಪ್ರಯತ್ನ ಮಾಡುತ್ತಾರೆ.

ಇದೇ ರೀತಿ ಬಾಲಿವುಡ್ ನಟಿ ರಾಧಿಕಾ ಮದನ್ ಅವರು ಸ್ವಿಮ್ಮಿಂಗ್ ಫೂಲ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಹಿಂದಿ ಚಿತ್ರವೊಂದರ ಗೀತೆಯ ಹಿನ್ನೆಲೆಯಲ್ಲಿ ಅವರು ವರ್ಕ್‌ಔಟ್ ಮಾಡುತ್ತಾ ಗಮನ ಸಳೆದಿದ್ದಾರೆ. ‘ಈಜುಡುಗೆಯಲ್ಲಿ ರಾಧಿಕಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ರಾಧಿಕಾ ಅವರ ಈ ಪರಿಶ್ರಮದ ವ್ಯಾಯಮವೇ‘ ಎಂದು ಹಲವು ಜನ ಕಮೆಂಟ್ ಮಾಡಿದ್ದಾರೆ.

ದೆಹಲಿ ಮೂಲದ ಚೆಲುವೆ ರಾಧಿಕಾ ಮದನ್, ಪಾಠಕ್, ಮರ್ದ್‌ ಕೊ ದರ್ದ್ ನಹಿ ಹೋತಾ, ಅಂಗ್ರೇಜಿ ಮೀಡಿಯಂ, ಸಿದ್ದಾತ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅವರು ಹಿಂದಿ ವೆಬ್‌ಸೀರಿಸ್‌ಗಳಲ್ಲಿ ಹೆಸರು ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು