ಶುಕ್ರವಾರ, ಫೆಬ್ರವರಿ 28, 2020
19 °C

ಹೆಣ್ತನವ ಹೊದ್ದ ರಣವೀರ್ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ವೋಗ್’ ಪತ್ರಿಕೆಯ ಮುಖಪುಟಕ್ಕಾಗಿ #blurredlines ಹ್ಯಾಶ್‌ಟ್ಯಾಗ್‌ನಲ್ಲಿ ಫೋಟೊ ಶೂಟ್‌ ನಡೆದಿತ್ತು. ಅದರಲ್ಲಿ ರಣವೀರ್‌ ಸಿಂಗ್ ಹಾಗೂ ವಿಕ್ಟೋರಿಯಾ ಸೀಕ್ರೆಟ್ ಮಾಡೆಲ್ ಸಾರಾ ಸಂಪಾಯೊ ಫ್ಲೋರಲ್ ದಿರಿಸುತೊಟ್ಟು ಗಮನ ಸೆಳೆದಿದ್ದರು.

ಸಾರಾ ನೀಲಿ ಬಣ್ಣದ ಮೇಲೆ ತಿಳಿ ಬಣ್ಣದ ಗುಲಾಬಿಗಳು ಇದ್ದ ಬಿಕಿನಿ ಹಾಗೂ ಸ್ಕರ್ಟ್‌ ತೊಟ್ಟಿದ್ದರೆ, ರಣವೀರ್‌ ನೇರಳೆ ಬಣ್ಣದ ಮೇಲೆ ಗುಲಾಬಿ ಹೂವಿರುವ ಫ್ರೀ ಸೈಜ್‌ ಕೋಟ್‌ ಧರಿಸಿದ್ದರು. ಗಡಸು ನೋಟ, ತಿದ್ದಿತೀಡಿದ ಮೀಸೆ, ಹೂ ಬಣ್ಣದ ಬಟ್ಟೆ ಹೊದ್ದು ಸಿಂಹದಂತೆ ಒರಗಿ ಕೂತಿದ್ದರು ರಣವೀರ್‌. ಈ ಫೋಟೊಗಳು ಬಿಡುಗಡೆಯಾಗುತ್ತಿದ್ದಂತೆ ರಣವೀರ್ ಹುಡುಗಿಯರಂತೆ ವೇಷ ತೊಟ್ಟಿದ್ದಾರೆ ಎಂದು ಕೆಲವರು ಗೇಲಿ ಮಾಡಿದರೆ, ಹೆಣ್ತನ ಹೊದ್ದ ರಣವೀರ್‌ ನಡೆಗೆ ಕೆಲವರಿಂದ ಮೆಚ್ಚುಗೆ ವ್ಯಕ್ತಗೊಂಡಿತ್ತು.

ಈ ಹಿಂದೆಯೂ ಅಷ್ಟೇ. ದೀಪಿಕಾ ಜೊತೆ ವಿವಾಹ ಸಂದರ್ಭದಲ್ಲೂ ರಣವೀರ್‌ ನಡೆದುಕೊಂಡಿದ್ದು ಕೊಂಚ ಡಿಫಿರೆಂಟ್‌. ಸಂಗೀತ ಶಾಸ್ತ್ರಕ್ಕೆ ದೀಪಿಕಾ ದಿರಿಸಿಗೂ ಮೀರಿಸುವಂಥ ಲೆಹಂಗಾ ಮಾದರಿಯ ಶೇರ್ವಾನಿ ತೊಟ್ಟು ರಣವೀರ್‌ ಗಮನ ಸೆಳೆದಿದ್ದರು. ಐವರಿ ಬಿಳಿಬಣ್ಣಕ್ಕೆ ಸಣ್ಣಸಣ್ಣ ಹೂವಿನ ಲೆಹಂಗಾ ಮಾದರಿಯ ನೆರಿಗೆಯುಳ್ಳ ಟಾಪ್‌ ಹಾಗೂ ಗುಲಾಬಿ ಬಣ್ಣದ ಕೋಟ್‌ ಧರಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.

ಇವರ ಫ್ಲೋರಲ್‌ ಬಟ್ಟೆ ಪ್ರೇಮವನ್ನು ಪ್ರಶ್ನಿಸಿದವರಿಗೆ ‘ನಾನು ಹೆಣ್ತನವನ್ನು ಪ್ರೀತಿಸುತ್ತೇನೆ. ನನ್ನ ಹೆತ್ತವಳು ಹೆಣ್ಣು. ನಾನು ಪ್ರೇಮಿಸಿದ್ದು ಹೆಣ್ಣನ್ನು, ಸ್ತ್ರೀತನ ನನ್ನ ಒಡಲಲ್ಲೂ ಇದೆ. ಈ ಭಾವವನ್ನು ಖುಷಿಪಡಿಸುತ್ತಿದ್ದೇನೆ. ನನ್ನೊಳಗಿನ ಹೆಣ್ಣಿಗೆ ಇದೆಲ್ಲಾ ಅರ್ಪಣೆ’ ಎಂದೆಲ್ಲ ಹೇಳಿಕೊಂಡಿದ್ದರು. ಮೆಹಂದಿ ಶಾಸ್ತ್ರದಲ್ಲೂ ಹಾಗೆಯೇ ವರ್ತಿಸಿದ್ದರು. ಮದುಮಗಳ ಕೈಯಲ್ಲಿ ಪತಿಯ ಹೆಸರು ಬರೆಯುವುದು ರೂಢಿ, ಆದರೆ ರಣವೀರ್‌, ತಮ್ಮ ಅಂಗೈ ಮೇಲೆ ದೀಪಿಕಾ ಹೆಸರು ಬರೆಸಿಕೊಂಡಿದ್ದರು!

ಕಪ್ಪು–ನೀಲಿ ಬಣ್ಣ ಗಂಡಿಗೆ, ಗುಲಾಬಿ ಬಣ್ಣ ಹೆಣ್ಣಿಗೆ ಎನ್ನುವ ಏಕತಾನತೆಯನ್ನು ಅವರು ಮುರಿದಿದ್ದು ಬಾಲಿವುಡ್‌ನಲ್ಲಿ ಸಂಚಲನವನ್ನುಂಟು ಮಾಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪತ್ನಿ ದೀಪಿಕಾ ಕಪ್ಪುಬಣ್ಣದ ಗೌನ್‌ ತೊಟ್ಟಿದ್ದರೆ, ರಣವೀರ್‌ ತಿಳಿ ನೇರಳೆ ಹಾಗೂ ಕೆಂಪು ಬಣ್ಣ ಫ್ಲೋರಲ್ ಸೂಟ್‌ ತೊಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು