ಭಾನುವಾರ, ಜನವರಿ 16, 2022
28 °C

ಪಂಜಾಬಿ ಗಾಯಕಿ ಗುರ್ಮೀತ್‌ ಬಾವಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಅಮೃತಸರ: ದೀರ್ಘಕಾಲದ ಅನಾರೋಗ್ಯದಿಂದಾಗಿ ಪ್ರಸಿದ್ಧ ಪಂಜಾಬಿ ಗಾಯಕಿ ಗುರ್ಮೀತ್‌ ಬಾವಾ(77) ಅವರು ಭಾನುವಾರ ನಿಧನರಾದರು. 

‘ಗುರ್ಮೀತ್‌ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಶನಿವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿಯೇ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ಸ್ನೇಹಿತ ಭೂಪೀಂದರ್‌ ಸಿಂಗ್‌ ಸಂಧು ಹೇಳಿದರು. 

ಪಂಜಾಬ್‌ ಜನಪದ ಗಾಯಕ ಕಿರ್ಪಾಲ್‌ ಬಾವಾ ಅವರ ಪತ್ನಿ ಗುರ್ಮೀತ್‌ ಬಾವಾ ಅವರು 45 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದು ಸುಮಧುರ ರಾಗವನ್ನು ಹಾಡುವಲ್ಲಿ ಹೆಸರುವಾಸಿಯಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು