ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮೊದಲ ಬಾರಿಗೆ ವೆಬ್ ಸೀರೀಸ್ನಲ್ಲಿ ನಟಿಸುತ್ತಿದ್ದಾರೆ.

ಬೃಂದಾ ಎಂಬ ವೆಬ್ ಸೀರೀಸ್ನಲ್ಲಿ ತ್ರಿಷಾ ನಟಿಸುತ್ತಿದ್ದು ಇದು ಸೋನಿ ಲಿವ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ವಿಜಯದಶಮಿ ಹಬ್ಬದ ದಿನ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.

ಈವೆಬ್ ಸೀರೀಸ್ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಪ್ರಸಾರವಾಗಲಿದೆ. ತೆಲುಗಿನ ಕಾರ್ಯಕಾರಿ ನಿರ್ಮಾಪಕ ಅವಿನಾಶ್ ಕೊಲ್ಲ ಇದನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸೂರ್ಯ ವೆಂಗಲ ಕಥೆಗೆಜಯ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಕ್ತಿ ಕಾಂತ್ ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದು ದಿನೇಶ್ ಕೆ ಬಾಬು ಛಾಯಾಗ್ರಾಹಕರಾಗಿದ್ದಾರೆ.

ತ್ರಿಷಾ ಸೇರಿದಂತೆ ಸಾಯಿ ಕುಮಾರ್, ಅಮಾನಿ, ಇಂದ್ರಜಿತ್ ಸುಕುಮಾರನ್, ರವೀಂದ್ರ ವಿಜಯ್ ಮತ್ತು ಆನಂದ್ ಸಾಮಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.