ಮಂಗಳವಾರ, ಜನವರಿ 26, 2021
16 °C

ಬಹುನಿರೀಕ್ಷಿತ ವೆಬ್‌ಸರಣಿ ‘ತಾಂಡವ್‌’ ಜ.15ರಂದು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2021ರ ಬಹುನಿರೀಕ್ಷಿತ ವೆಬ್‌ಸರಣಿ ‘ತಾಂಡವ್‌’. ಸೈಫ್ ಅಲಿಖಾನ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ವೆಬ್‌ಸರಣಿ ಜ.15ರಂದು ಅಮೆಜಾನ್ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.

ರಾಜಕೀಯ ಕಥಾಹಿನ್ನೆಲೆ ಇರುವ ಈ ಸರಣಿಗೆ ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನ ಮಾಡಿದ್ದಾರೆ. ಹಿಮಾಂಶು ಕಿಶನ್ ಮೆಹ್ರಾ ಹಾಗೂ ಅಲಿ ಅಬ್ಬಾಸ್ ಜಾಫರ್ ಈ ಸರಣಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದರಲ್ಲಿ ಒಟ್ಟು 9 ಎಪಿಸೋಡ್‌ಗಳಿವೆ.

ಟ್ರೇಲರ್‌ ಮೂಲಕ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿದ್ದ ತಾಂಡವ್‌ನಲ್ಲಿ ಸೈಫ್‌ ಅವರು ಸಮರ ಪ್ರತಾಪ್‌ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಮ್ಮ ತಂದೆಯ ನಿಗೂಢ ಸಾವಿನ ಬಳಿಕ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿ ರಾಜಕೀಯ ರಂಗಕ್ಕೆ ಬರುತ್ತಾನೆ ಸಮರ್. ಅನುರಾಧಾ ಎಂಬ ಪ್ರಧಾನಿ ಆಕಾಂಕ್ಷಿಯ ಪಾತ್ರದಲ್ಲಿ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ರಾಜಕೀಯರಂಗದ ಕರಾಳ ಮುಖದ ಪರಿಚಯ ಮಾಡಿಕೊಡುವಂತಿದೆ ಸರಣಿ. ಟ್ರೇಲರ್‌ನಲ್ಲಿ ಕಥಾವಸ್ತುವಿನ ಬಗ್ಗೆ ಹೆಚ್ಚಿನ ವಿವರ ತಿಳಿಸಿಲ್ಲ.

ಈ ವೆಬ್‌ಸರಣಿಯಲ್ಲಿ ಸುನಿಲ್ ಗ್ರೋವರ್‌, ಟಿಗ್ಮಂಶು ಧುಲಿಯಾ, ಕುಮುದ್ ಮಿಶ್ರಾ, ಮೊಹಮದ್‌ ಜಿಸಾನ್‌ ಅಯೂಬ್‌, ಕೃತಿಕಾ ಕಮ್ರಾ, ಸಾರಾ ಜೇನ್ ಡಯಾಸ್, ಗೌಹರ್ ಖಾನ್‌, ಕೃತಿಕಾ ಅವಸ್ಥಿ, ಡಿನೊ ಮೋರಿಯಾ, ಅನೂಪ್ ಸೋನಿ, ಪರೇಶ್‌ ಪಹುಜಾ, ಸಂಧ್ಯಾ ಮೃದುಲ್‌, ಸೋನಾಲಿ ನಗ್ರಾನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು