ಬುಧವಾರ, ಜುಲೈ 6, 2022
22 °C

ಹಾವನ್ನು ನಾನೇ ಕೈಯಲ್ಲಿ ಹಿಡಿದುಕೊಂಡಿದ್ದೆ, ಮೂರು ಬಾರಿ ಕಚ್ಚಿದೆ: ಸಲ್ಮಾನ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Salman file photo

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಶನಿವಾರ ರಾತ್ರಿ ಹಾವು ಕಚ್ಚಿದ್ದು, ಬಳಿಕ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ.

ಆದರೆ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದ್ದ ಸಲ್ಮಾನ್ ಅವರಿಗೆ ಹಾವು ಕಡಿದಿದ್ದು, ಅವರ ಕುಟುಂಬಸ್ಥರು ಮತ್ತು ಗೆಳೆಯರಿಗೆ ಆತಂಕ ಮೂಡಿಸಿತ್ತು.

ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಸೋಮವಾರ ಹೇಳಿಕೆ ನೀಡಿದ್ದು, ಫಾರ್ಮ್‌ಹೌಸ್‌ನಲ್ಲಿದ್ದ ವೇಳೆ ಹಾವು ಮನೆಯೊಳಗಡೆ ಪ್ರವೇಶಿಸಿತ್ತು. ಅದನ್ನು ರಕ್ಷಿಸಿ ಹೊರಗಡೆ ಬಿಡುವ ವೇಳೆಯಲ್ಲಿ ಉಂಟಾದ ಗಡಿಬಿಡಿಯಲ್ಲಿ ಹಾವು ಗೊಂದಲಕ್ಕೀಡಾಗಿ ನನಗೆ ಮೂರು ಬಾರಿ ಕಚ್ಚಿದೆ ಎಂದಿದ್ದಾರೆ.

ಕಚ್ಚಿದ ಹಾವು ವಿಷಕಾರಿಯಲ್ಲ ಎಂಬುದು ತಿಳಿಯಿತು. ಆದರೂ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ತೆರಳಿ, ವಿಷ ನಿರೋಧಕ ಚುಚ್ಚುಮದ್ದು ಮತ್ತು ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದೇನೆ ಎಂದು ಸಲ್ಮಾನ್ ಹೇಳಿದ್ದಾರೆ.

ಹಾವು ಕಚ್ಚಿದ ವಿಚಾರ ತಿಳಿದು ನನ್ನ ತಂದೆ ಸಲೀಮ್ ಖಾನ್ ಆತಂಕಕ್ಕೀಡಾಗಿದ್ದರು. ಅವರ ಜತೆ ಮಾತನಾಡಿ, ನಾನು ಮತ್ತು ಹಾವು ಇಬ್ಬರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದೇನೆ ಎಂದು ಸಲ್ಮಾನ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು