ಬೆಂಗಳೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಚಿತ್ರರಂಗದಲ್ಲಿ ಇತ್ತೀಚೆಗೆ ಮಿಂಚುತ್ತಿದ್ದಾರೆ. ಅವರನ್ನು ಬಾಲಿವುಡ್‌ನ ಮುಂದಿನ ಪೀಳಿಗೆಯ ನಟಿ ಎಂದೇ ಬಿಂಬಿಸಲಾಗುತ್ತಿದೆ.
ಸಾರಾ ಅವರು ಇತ್ತೀಚೆಗೆ ಯುವತಿಯೋರ್ವಳ ಜತೆ ನಡೆದುಕೊಂಡಿರುವ ರೀತಿಯನ್ನು ಜನರು ಖಂಡಿಸಿದ್ದು, ಇಂಟರ್‌ನೆಟ್‌ನಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಸಿನಿಮಾ ಸೆಟ್‌ನಲ್ಲಿ ಬಿಡುವಿನ ವೇಳೆಯಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘ಆಸ್ಕ್ ಮಿ ಎನಿಥಿಂಗ್‘ ಎಂದು ಅಭಿಮಾನಿಗಳಲ್ಲಿ ಕೇಳಿದ್ದರು.
ಈ ಸಂದರ್ಭದಲ್ಲಿ, ನೀವು ಮಾಡಿರುವ ಪ್ರಾಂಕ್ ವಿಡಿಯೊ ಯಾವುದಾದರೂ ಇದೆಯೇ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರವಾಗಿ, ಸಾರಾ ಅವರು ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು.
ಈಜುಕೊಳದ ಬಳಿ ನಿಂತಿದ್ದ ಸಾರಾ, ಯುವತಿಯನ್ನು ಹತ್ತಿರಕ್ಕೆ ಕರೆದಿದ್ದರು. ಫೋಟೊಗೆ ಪೋಸ್ ಕೊಡುವಂತೆ ನಟಿಸಿದ್ದ ಅವರು, ಕ್ಷಣದಲ್ಲೇ ಯುವತಿಯನ್ನು ನೀರಿಗೆ ತಳ್ಳಿದ್ದರು. ಈಜುಕೊಳಕ್ಕೆ ಬಿದ್ದಿದ್ದ ಯುವತಿ ಗಾಬರಿಗೊಂಡಿದ್ದರು.