ಮಂಗಳವಾರ, ಜುಲೈ 5, 2022
25 °C

₹80 ಲಕ್ಷದ ಔಡಿ ಕಾರು ಖರೀದಿಸಿದ ನಟಿ ಶಾನಾಯ ಕಪೂರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Instagram Post PHOTO SC

ಬೆಂಗಳೂರು: ಬಾಲಿವುಡ್‌ ನಟ ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ದಂಪತಿ ಪುತ್ರಿ ಶಾನಾಯ ಕಪೂರ್ ಹೊಸ ಲಕ್ಷುರಿ ಕಾರ್ ಖರೀದಿಸಿದ್ದಾರೆ.

ಕರಣ್ ಜೋಹರ್ ಅವರ ಹೊಸ ಚಿತ್ರದಲ್ಲಿ ಶಾನಾಯ ನಟಿಸುತ್ತಿರುವುದು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಅವರು ₹80 ಲಕ್ಷ ಬೆಲೆಯ ಹೊಸ ಔಡಿ ಐಷಾರಾಮಿ ಕ್ಯೂ7 ಫೇಸ್‌ಲಿಫ್ಟ್ ಆವೃತ್ತಿ ಕಾರು ಖರೀದಿಸಿದ್ದಾರೆ.

ಔಡಿ ಮುಂಬೈ ವೆಸ್ಟ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶಾನಾಯ ಅವರ ನೂತನ ಕಾರು ಫೋಟೊ ಸಹಿತ ಕುಟುಂಬದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.

22 ವರ್ಷದ ನಟಿ ಶಾನಾಯ ಕಪೂರ್ ಅವರು ಐಷಾರಾಮಿ ಕಾರು ಖರೀದಿಸಿರುವುದನ್ನು ಕಂಡ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಬಾಲಿವುಡ್‌ನ ಹಲವು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಶಾನಾಯ ಈ ವರ್ಷ ತೊಡಗಿಸಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು