ಗುರುವಾರ , ಜುಲೈ 29, 2021
25 °C

ಹಾಲಿವುಡ್‌ನಲ್ಲಿ ನೆಲೆಸುವುದು ಇಷ್ಟವಿಲ್ಲವೆಂದು ಆಫರ್ ಕೈಬಿಟ್ಟ ಶಿಲ್ಪಾ ಶೆಟ್ಟಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File Photo

ಬೆಂಗಳೂರು: ಲಾಸ್ ಏಂಜಲೀಸ್‌ನಲ್ಲಿ ನೆಲೆಸುವುದು ಇಷ್ಷವಿಲ್ಲವೆಂದು ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್‌ನ ಪ್ರಮುಖ ಅವಕಾಶವೊಂದನ್ನು ನಿರಾಕರಿಸಿದ್ದಾರೆ.

ಬಾಲಿವುಡ್‌ನ ಪ್ರಮುಖ ನಟಿ ಶಿಲ್ಪಾ ಶೆಟ್ಟಿ, ‘ನಚ್ ಬಲಿಯೇ’, ‘ಸೂಪರ್ ಡ್ಯಾನ್ಸರ್’ನಂತಹ ವಿವಿಧ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ ಹಾಲಿವುಡ್‌ನ ಪ್ರಮುಖ ಯೋಜನೆಯೊಂದರಲ್ಲಿ ಅವಕಾಶ ದೊರೆತರೂ, ಅದಕ್ಕಾಗಿ ಅಮೆರಿಕದ ಲಾಸ್ ಏಂಜಲೀಸ್‌ಗೆ ತೆರಳಿ ನೆಲೆಸಬೇಕಾಗಿದ್ದರಿಂದ, ಅದನ್ನು ನಿರಾಕರಿಸಿರುವ ನಟಿ, ಮುಂಬೈನಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದಾರೆ.

ಹಾಲಿವುಡ್ ಅವಕಾಶದ ಬಗ್ಗೆ ಶಿಲ್ಪಾ ಮಗನಿಗೂ ಅಸಮಾಧಾನವಿತ್ತು. ತನ್ನ ತಾಯಿ ಅಲ್ಲಿ ಹೋಗಿ ನೆಲೆಸುವುದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ ಅಮೆರಿಕಕ್ಕೆ ತೆರಳುವ ನಿರ್ಧಾರವನ್ನು ಕೈಬಿಡಲಾಯಿತು ಎಂದು ನಟಿ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು