ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲಿಬೋರ್ಡ್‌ ಗ್ಲೋಬಲ್‌ 200 ಪಟ್ಟಿ ಸೇರಿದ ಸಿಧು ಮೂಸೆವಾಲಾರ '295' ಹಾಡು

Last Updated 17 ಜೂನ್ 2022, 16:17 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹಾಡುಗಳು ನಿಧಾನಕ್ಕೆ ಜನರನ್ನು ತಲುಪುತ್ತಿದ್ದು, '295' ಶೀರ್ಷಿಕೆಯ ಹಾಡು 'ಬಿಲ್ಲಿಬೋರ್ಡ್‌ ಗ್ಲೋಬಲ್‌ 200'ರ ಪಟ್ಟಿ ಸೇರಿದೆ. ಯೂಟ್ಯೂಬ್‌ನಲ್ಲಿ ಟಾಪ್‌ 3ನೇ ಸ್ಥಾನಕ್ಕೆ ಏರಿದೆ.

ಮೂಸೆವಾಲಾ ಅವರ '295' ಹಾಡು ಶುಕ್ರವಾರ ಟಾಪ್‌ 200 ಹಾಡುಗಳ ಪೈಕಿ 154ನೇ ಸ್ಥಾನದಲ್ಲಿದೆ.

ಮೂಸೆವಾಲಾ ಅವರ ನಿಜವಾದ ಹೆಸರು ಶುಭ್‌ದೀಪ್‌ ಸಿಂಗ್‌. ಇವರ 'ಸೋ ಹೈ', 'ಸೇಮ್‌ ಬೀಫ್‌', 'ದಿ ಲಾಸ್ಟ್‌ ರೈಡ್‌' ಮತ್ತು 'ಜಸ್ಟ್‌ ಲಿಸನ್‌' ಮುಂತಾದ ಹಾಡುಗಳು ಪ್ರಸಿದ್ಧಿಗೆ ಬರುತ್ತಿವೆ.

ಪಂಜಾಬ್‌ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದರು. ಮೂಸೆವಾಲಾ ಅವರ ದೇಹದೊಳಗೆ 19 ಗುಂಡುಗಳು ಹೊಕ್ಕಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT