ಬೆಂಗಳೂರು: ಬಾಳೆ ಎಲೆಯಲ್ಲಿ ಊಟ ಮಾಡುವಾಗ ನಾನು ದೇವತೆ ಎಂದು ಭಾಸವಾಗುತ್ತದೆ ಎಂದು ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ.
ಚಿತ್ರರಂಗದಲ್ಲಿ 'ಮಿಲ್ಕಿ ಬ್ಯೂಟಿ' ಎಂಬ ಹೆಸರಿನಿಂದ ಗುರುತಿಸಲ್ಪಡುವ ನಟಿ ತಮನ್ನಾ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ.
ಅದರಲ್ಲಿ ಬಾಳೆ ಎಲೆಯಲ್ಲಿ ಅವರು ತಿನಿಸು ಸೇವಿಸುತ್ತಿದ್ದಾರೆ. ಜತೆಗೆ ಈ ಫೋಟೊಗೆ ಅವರು, ಬಾಳೆ ಎಲೆಯ ಬಳಕೆ ಅತ್ಯಂತ ಸುಲಭ, ಪರಿಸರ ಮತ್ತು ನಮ್ಮ ಆರೋಗ್ಯಕ್ಕೂ ಒಳ್ಳೆಯದೇ.. ನಮ್ಮ ಸಂಪ್ರದಾಯದ ಕಡೆ ಒಮ್ಮೆ ಹೋಗಿ ಬಂದಂತಾಯಿತು ಎಂಬ ಅಡಿಬರಹ ನೀಡಿದ್ದಾರೆ.