ಶನಿವಾರ, ಜೂಲೈ 11, 2020
29 °C

ಟಿಕ್‌ಟಾಕ್‌ ಸ್ಟಾರ್ ಸಿಯಾ ಕಕ್ಕರ್‌ ನೇಣಿಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಯಾ ಕಕ್ಕರ್‌

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್ ಆತ್ಮಹತ್ಯೆ ಕಹಿ ಸುದ್ದಿ ಮರೆಯುವ ಮುನ್ನವೇ ದೆಹಲಿ ಮೂಲದ 16 ವರ್ಷದ ಟಿಕ್‌ಟಾಕ್ ಸ್ಟಾರ್ ಸಿಯಾ ಕಕ್ಕರ್‌‌ ಆತ್ಮಹತ್ಯೆಗೆ ಶರಣಾಗಿದ್ದಾಳೆ.  

ಟಿಕ್‌ಟಾಕ್‌ನಲ್ಲಿ ಡಾನ್ಸ್‌ ವಿಡಿಯೊಗಳಿಂದ ಭಾರಿ ಸುದ್ದಿಯಾಗಿದ್ದ ಸಿಯಾ‌ ದೆಹಲಿಯ ನಿವಾಸದಲ್ಲಿ ಗುರುವಾರ ನೇಣು ಬಿಗಿದುಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಸ್ಥಳದಲ್ಲಿ ಮರಣಪತ್ರವೂ ದೊರೆತಿಲ್ಲ.

ಟಿಕ್‌ಟಾಕ್‌ನಲ್ಲಿ ಆಕೆ ಮಾಡುತ್ತಿದ್ದ ಪೋಸ್ಟ್‌ಗಳಿಗಾಗಿ ಬೆದರಿಕೆ ಒಡ್ಡಲಾಗಿತ್ತು. ಅದರಿಂದ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಆಕೆಯ ಮೊಬೈಲ್‌ ವಶಕ್ಕೆ ಪಡೆದಿದ್ದಾರೆ. ಅದು ಲಾಕ್‌ ಆಗಿದ್ದು ಮನೆಯವರಿಂದ ಅನ್‌ಲಾಕ್ ಪ್ಯಾಟರ್ನ್ ತಿಳಿಯಲು ಯತ್ನಿಸುತ್ತಿದ್ದಾರೆ. ಸದ್ಯ ಮನೆಯ ಸದಸ್ಯರೆಲ್ಲ ಆಘಾತದಲ್ಲಿದ್ದು, ಅದರಿಂದ ಹೊರಬಂದ ಮೇಲೆ ಅವರ ನೆರವು ಪಡೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

 
 
 
 

 
 
 
 
 
 
 
 
 

And Its TIME to get knocked out by this lethal combination of an Epic Punjabi Song and an enchanting beauty. Watch the King of Desi Hip-Hop Bohemia, soulful singer JS Atwal along with Lola Gomez in the official video of Our Latest Single, "Sharaabi Teri Tor". The Most Awaited Song of 2020 is OUT !! Watch the Video Now. . . . @iambohemia @atwalinsta @lolitaxo__ @mbmusicco @meetbrosofficial @meet_bros_manmeet @harmeet_meetbros @shaxeoriah @urshappyraikoti @jaggisim @desihiphopking @touchblevins @raajeev.r.sharma @itsumitsharma @psycho_marketer @fameexpertz #SharaabiWalk #SharaabiWalkChallenge #SharaabiTeriTor #Bohemia #HipHop #Rap #Punjabi #JsAtwal #HappyRaikoti #intoxicating #MBMusic #sharaab #musicvideo #fameexpertz

A post shared by Siya Kakkar (@siya_kakkar) on

ಮುಂಬೈ ಮೂಲದ ಸಿಯಾ ಕಕ್ಕರ್‌ ಕುಟುಂಬ ಕೆಲವು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿತ್ತು. ಇಂಟರ್‌ನೆಟ್‌ ಸೆನ್‌ಸೇಷನ್‌ ಆಗಿದ್ದ ಆಕೆಗೆ‌ ಟಿಕ್‌ಟಾಕ್‌ನಲ್ಲಿ 10 ಲಕ್ಷ ಫ್ಯಾನ್‌ ಫಾಲೋವರ್ಸ್‌ಗಳಿದ್ದರು. ಸಾಯುವ 20 ಗಂಟೆ ಮೊದಲು ಸಿಯಾ ಕೊನೆಯ ವಿಡಿಯೊಂದನ್ನು ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡಿದ್ದಳು.

ಮನೆಯ ಛತ್ತಿನ ಮೇಲೆ ತಂಗಾಳಿಗೆ ಮುಖವೊಡ್ಡಿ ನಿಂತಿರುವ ಹಾಲುಗಲ್ಲದ ಸಿಯಾ ಗಾಳಿಗೆ ಹಾರಾಡುತ್ತಿರುವ ಕೂದಲನ್ನು ನವಿರಾಗಿ ಹಿಂದಕ್ಕೆ ತಳ್ಳುತ್ತ ನಸುನಗುತ್ತಾಳೆ. ನಂತರ ‘ಹಜಾರ್‌ ಚೆಹರೊ ಮೇ ಸಿರ್ಫ್ ತುಮ್‌ ಅಚ್ಚಾ ಲಗೇ ಹಮೆ. ವರ‍್ನಾ ನಾ ಚಾಹತ್‌ ಕೀ ಕಮಿ ಥಿ, ಯಾ ಚಾಹನೇ ವಾಲೋಂಕಿ...‌’ ಎಂಬ ಡೈಲಾಗ್‌ಗೆ ತುಟಿ ಆಡಿಸಿದ್ದಳು. ನಟ ಅಮೀರ್ ಖಾನ್‌ ಮತ್ತು ಕಾಜೋಲ್ ನಟಿಸಿದ ‘ಫನ್ಹಾ’ ಚಿತ್ರದ ಈ ಡೈಲಾಗ್‌ ಮುದ್ದುಮುಖದ ಸಿಯಾ ಕಕ್ಕರ್‌ ಕೊನೆಯ ಟಿಕ್‌ಟಾಕ್ ಎಂದು ಯಾರೂ ಎಣಿಸಿರಲಿಲ್ಲ.

‘ಕಳೆದ ರಾತ್ರಿ ಹಾಡೊಂದರ ವಿಷಯವಾಗಿ ನಾನು ಆಕೆಯೊಂದಿಗೆ ಮಾತನಾಡಿದ್ದೆ. ಆಕೆ ಗೆಲುವಾಗಿದ್ದಳು. ಆಕೆಯ ಮಾತುಗಳಲ್ಲಿ ಖಿನ್ನತೆಯ ಲಕ್ಷಣಗಳಿರಲಿಲ್ಲ. ಒಂದಿನಿತು ಆತ್ಮಹತ್ಯೆಯ ಸುಳಿವು ಇರಲಿಲ್ಲ. ಆದಾಗಿ ಇನ್ನೂ 24 ಗಂಟೆಯಾಗಿಲ್ಲ ಆಕೆಯ ಆತ್ಮಹತ್ಯೆ ಸುದ್ದಿ ಬಂದಿದೆ’ ಎಂದು ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಏಜೆನ್ಸಿ ಮುಖ್ಯಸ್ಥ ಅರ್ಜಿನ್‌ ಸರಿನ್‌ ಹೇಳಿದ್ದಾರೆ.

 
 
 
 

 
 
 
 
 
 
 
 
 

1 or 2 ?🌟💃🏻😍 #bellaciao #skechers

A post shared by Siya Kakkar (@siya_kakkar) on

ಕಳೆದ ಒಂದು ತಿಂಗಳಲ್ಲಿ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ, ಸೆಲೆಬ್ರಿಟಿ ಮ್ಯಾನೇಜರ್‌ ದಿಶಾ ಸಾಲಿಯಾನ್ ಮತ್ತು ನಟ ಸುಶಾಂತ್‌ ಸಿಂಗ್ ರಜಪೂತ್‌‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಯಾ ಕಕ್ಕರ್ ಖಿನ್ನತೆಯಿಂದ ಬಳಲುತ್ತಿದ್ದಳು ಎಂಬ ಸುದ್ದಿಯನ್ನು ಆಕೆಯ ಕುಟುಂಬ ಸದಸ್ಯರು ತಳ್ಳಿ ಹಾಕಿದ್ದಾರೆ.

 
 
 
 

 
 
 
 
 
 
 
 
 

Mehbooba☺️😍🔥

A post shared by Siya Kakkar (@siya_kakkar) on

(ಮಾಹಿತಿ: ವಿವಿಧ ಮೂಲಗಳಿಂದ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು