ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಗಾಯಕಿ ಸಂಗೀತಾ ರಾಜೀವ್ ‘ವೆಡ್‌ಲಾಕ್ ಡೌನ್‘ ಎಂಬ ವಿಶಿಷ್ಟ ಹಾಡಿನ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.

ಪರಸ್ಪರ ಪರಿಚಯವೇ ಇಲ್ಲದ ಹುಡುಗ – ಹುಡುಗಿಯರ ನಡುವೆ ನಡೆಯುವ ಮದುವೆಯ ಪ್ರಪೋಸಲ್ ಮತ್ತು ಪರಸ್ಪರ ಯಾವ ಅಭಿರುಚಿಯ ಪರಿಚಯವೇ ಇಲ್ಲದ ಇಬ್ಬರ ನಡುವೆ ನಡೆಯುವ ಮಾತು–ಕಥೆ ಎಳೆಯನ್ನಿಟ್ಟುಕೊಂಡು ‘ವೆಡ್‌ಲಾಕ್‌ಡೌನ್‘ ಹಾಡನ್ನು ತಯಾರಿಸಿದ್ದಾರೆ. ಮಧುರವಾದ ಹಾಡು, ಚಂದನೆಯ ದೃಶ್ಯಗಳೊಂದಿಗೆ ಹಾಡಿನ ವಿಡಿಯೊ ಚೆನ್ನಾಗಿ ಮೂಡಿಬಂದಿದೆ.

ಆಕಾಶ್ ಜೋಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಹಾಡಿಗೆ ಸಂಗೀತ ರಾಜೀವ್ ಸಂಗೀತ ಸಂಯೋಜನೆ ಮಾಡುವ ಜತೆಗೆ, ಹಾಡು ಹಾಡಿದ್ದಾರೆ, ಅಭಿನಯಿಸಿದ್ದಾರೆ. ಇವರೊಂದಿಗೆ ಶಿವಾಜಿ ಸುರತ್ಕಲ್ ಸಿನಿಮಾ ಖ್ಯಾತಿಯ ಉದಯೋನ್ಮುಖ ನಟ ರೋಹಿತ್ ಭಾನುಪ್ರಕಾಶ್ ಕೂಡ ನಟಿಸಿದ್ದಾರೆ.ಸಂಗೀತ ಅವರ ಜತೆಗೆ ವಾಸು ದೀಕ್ಷಿತ್ ಕೂಡ ಹಾಡಿದ್ದಾರೆ. ಪ್ರದ್ಯುಮ್ನ ನರಹಳ್ಳಿ ಗೀತೆಗೆ ಸಾಹಿತ್ಯ ಬರೆದಿದ್ದಾರೆ.

ಈ ಹಾಡಿನ ವಿಡಿಯೊವನ್ನುಜೂನ್ 11 ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಎರಡು ದಿನಗಳಲ್ಲಿ ಸುಮಾರು ಒಂದು ಮುಕ್ಕಾಲು ಲಕ್ಷ ಮಂದಿ ವೀಕ್ಷಿಸಿದ್ದು, ಈಗ ಈ ಹಾಡು ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.