ಮಂಗಳವಾರ, ಜನವರಿ 21, 2020
28 °C

‘ಪಿಂಕ್‌’ ಸಿನಿಮಾ ರಿಮೇಕ್‌ | ₹ 50 ಕೋಟಿ ಕೊಟ್ಟರೂ ಪವನ್‌ ನಟಿಸುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪಿಂಕ್‌’ ಚಿತ್ರ ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ಈ ಚಿತ್ರದ ಮೂಲಕ ಪವರ್‌ಸ್ಟಾರ್‌ ಪವನ್‌ ಕಲ್ಯಾಣ್‌ ಟಾಲಿವುಡ್‌ನಲ್ಲಿ ಮತ್ತೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು. ಆದರೆ ಈ ಸಿನಿಮಾದಲ್ಲಿ ನಟಿಸಲು ಪವನ್‌ ಕಲ್ಯಾಣ್‌ ಆಸಕ್ತಿ ತೋರಿಸುತ್ತಿಲ್ಲವಂತೆ.

ಈ ಸಿನಿಮಾದಲ್ಲಿ ನಟಿಸಲು ನಿರ್ಮಾಪಕ ದಿಲ್‌ ರಾಜು, ನಟ ಪವನ್‌ ಕಲ್ಯಾಣ್‌ಗೆ ₹50 ಕೋಟಿ ಸಂಭಾವನೆಯನ್ನೂ ಕೊಡಲೂ ಸಿದ್ಧರಿದ್ದಾರೆ. ಆದರೆ ನಟನೆ ಬಗ್ಗೆ ಪವನ್‌ ಕಲ್ಯಾಣ್‌ರಿಂದ ಯಾವುದೇ ಸೂಚನೆ ಸಿಕ್ಕಿಲ್ಲ. ಪವನ್‌ ಕಲ್ಯಾಣ್‌ ನಟಿಸಿರುವ ಕೊನೆಯ ಚಿತ್ರ ‘ಅಜ್ಞಾತವಾಸಿ’ ಸಿನಿಮಾವು ಅವರಿಗೆ ನಿರೀಕ್ಷಿಸಿದಂತಹ ಗೆಲುವು ತಂದುಕೊಡಲಿಲ್ಲ. ಈ ಚಿತ್ರದ ಬಳಿಕ ಅವರು ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ, ರಾಜಕೀಯದ ಕಡೆಗೆ ಪೂರ್ಣ ಗಮನ ಕೊಟ್ಟಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಅವರು ಸೋತಿದ್ದರೂ ರಾಜಕೀಯದಲ್ಲೇ ಮುಂದುವರಿಯುವ ಅಭಿಲಾಷೆ ಅವರದು. ಸೋಲು ಕಂಡಿದ್ದರಿಂದ ಅವರು ಚಿತ್ರರಂಗಕ್ಕೆ ವಾಪಸ್ಸಾಗಬಹುದು ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು.

 ‘ಪಿಂಕ್‌’ ತೆಲುಗು ರಿಮೇಕ್‌ನಲ್ಲಿ, ಅವರು ಮೂಲ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಮಾಡಿರುವ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಪವನ್‌ ಕಲ್ಯಾಣ್‌ ಜೊತೆ ಕೆಲಸ ಮಾಡುವುದು ದಿಲ್ ರಾಜು ಅವರ ಕನಸಾಗಿತ್ತು. ತೆಲುಗು ಚಿತ್ರರಂಗದ ಎಲ್ಲಾ ಶ್ರೇಷ್ಠ ನಟರ ಜೊತೆ ದಿಲ್‌ ರಾಜು ಕೆಲಸ ಮಾಡಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಜೊತೆಗೆ ಯಾವ ಸಿನಿಮಾವನ್ನು ಮಾಡಿಲ್ಲ. ಈಗ ಈ ಚಿತ್ರಕ್ಕೆ ಪವನ್‌ ಜೊತೆ ಮಾತುಕತೆ ನಡೆಸಿದ್ದರು.

‘ಪಿಂಕ್‌’ ಕಮರ್ಷಿಯಲ್‌ ಅಥವಾ ಮಾಸ್‌ ಜನರಿಗೆ ಇಷ್ಟವಾಗುವ ಸಿನಿಮಾವಲ್ಲ. ಅದು ಕೋರ್ಟ್‌ರೂಮ್‌ ಡ್ರಾಮಾ ಸಿನಿಮಾ. ಒಂದು ವೇಳೆ ತೆಲುಗಿನಲ್ಲಿ ಈ ಸಿನಿಮಾ ಸೋತರೆ?’ ಎಂಬ ಲೆಕ್ಕಾಚಾರ ಪವನ್‌ ಅವರದು ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಮುಂದಿನ ದಿನಗಳಲ್ಲಿ ಪವನ್‌ ಈ ಸಿನಿಮಾಕ್ಕೆ ಒಪ್ಪಿಗೆ ಕೊಡುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು