ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಸ್ತ್ರ ಸಂತಾನ’ ನಾಟಕ ಪ್ರದರ್ಶನ

Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಶ್ರೀಪಾದ ಭಟ್ ಧಾರೇಶ್ವರ ಅವರ ನಿರ್ದೇಶನದ ‘ಶಸ್ತ್ರ ಸಂತಾನ’ ನಾಟಕ ನಗರದಲ್ಲಿ ಪ್ರದರ್ಶನಗೊಳ್ಳಲಿದೆ.

ಎಲ್ಲೇ ಯುದ್ಧ ಆಗಲಿ ಅದರ ಅಟ್ಟಹಾಸಕ್ಕೆ ಬಲಿಯಾಗುವವರು ಮಹಿಳೆಯರು, ಬಡ ಜನರು, ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಮಕ್ಕಳು. ಮಾರುಕಟ್ಟೆ ತನ್ನ ಪ್ರಭುತ್ವವನ್ನು ಯಾವಾಗಲೂ ಸಾಧಿಸುತ್ತದೆ. ಶಸ್ತ್ರಾಸ್ತ್ರಗಳ ವ್ಯಾಪಾರವೂ ದೇಶ, ಧರ್ಮ ಭಾಷೆಯ ಪರಿವೆ ಇಲ್ಲದೆ ನಡೆಯುತ್ತದೆ. ಇದು ಜೀವವನ್ನು ಸಂಕಷ್ಟಕ್ಕೆ ಈಡುಮಾಡುತ್ತದೆ. ಈ ಎಲ್ಲಾ ಸಂಗತಿಗಳನ್ನು ನಾಟಕ ಒಳಗೊಂಡಿದೆ.

ಪುರಾಣ, ಇತಿಹಾಸ ಹಾಗೂ ವರ್ತಮಾನದ ಸಂಘರ್ಷಗಳನ್ನು ನಾಟಕದಲ್ಲಿ ತೋರಿಸಲಾಗಿದೆ. ನಗರದ ಜೀವನ, ಅಲ್ಲಿಯ ಹಿಂಸೆಗೆ ಬಲಿಯಾಗುವ ಜನರ ಗೋಳನ್ನು ಎತ್ತಿಹಿಡಿಯುವ ಪ್ರಯತ್ನ ಇದೆ. ಇದು ಮಹಾಭಾರತದ ಕತೆ ಮಾತ್ರ ಅಲ್ಲ. ಇಡೀ ಭಾರತದ ಕತೆಯಂತೆ ಕಾಣುತ್ತದೆ.

ರಚನೆ: ರಾಮೇಶ್ವರ ಪ್ರೇಮ್

ಕನ್ನಡಕ್ಕೆ: ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ

ವಿನ್ಯಾಸ: ಚನ್ನಕೇಶವ

ಸಂಗೀತ ಸಾಂಗತ್ಯ: ವಾಸುಕಿ ವೈಭವ್

ವಸ್ತ್ರವಿನ್ಯಾಸ: ಸ್ವರ್ಣ ಮಣಿಪಾಲ್

ಸಹ ನಿರ್ದೇಶನ: ಬಿಂದು ರಕ್ಷಿದಿ

ಆಯೋಜನೆ–ಸಮುದಾಯ ಬೆಂಗಳೂರು

ಮೂರನೇ ಪ್ರದರ್ಶನದ ಸ್ಥಳ–ರಂಗಶಂಕರ, ಜೆ.ಪಿ.ನಗರ, ಗುರುವಾರ, ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT