ಭಾನುವಾರ, ಸೆಪ್ಟೆಂಬರ್ 27, 2020
21 °C

ವಿಭಿನ್ನ ನಾಟಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಎಸ್‌.ಮುದ್ದಪ್ಪ ಸ್ಮಾರಕ ಟ್ರಸ್ಟ್ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ 150ನೇ ಜಯಂತಿ ಪ್ರಯುಕ್ತ ‘ಗಾಂಧಿ ಜಯಂತಿ’ ನಾಟಕ ಪ್ರದರ್ಶಿಸಲಾಗುತ್ತಿದೆ.

ಇಂದಿನ ರಾಜಕೀಯ ಪರಿಸ್ಥಿತಿ, ಭ್ರಷ್ಟ ರಾಜಕಾರಣಿಗಳು, ಲಂಚಾವತಾರ, ಚುನಾವಣೆ, ವಿಧಾನಸಭೆ, ಲೋಕಸಭೆ ಕಲಾಪಗಳನ್ನು ಕುರಿತು ಗಾಂಧೀಜಿಯ ಪ್ರತಿಕ್ರಿಯೆ ಏನಿರಬಹುದು ಎಂಬ ಕಲ್ಪನೆಯನ್ನು ತೆರೆಯ ಮೇಲೆ ತರಲಾಗಿದೆ.

ನಾಟಕದ ತೆಲುಗು ಮೂಲ–ವಿಜಯಭಾಸ್ಕರ್‌, ಕನ್ನಡ ಅನುವಾದ–ಲಕ್ಷ್ಮೀದೇವಿ, ನಿರ್ವಹಣೆ–ಕೆಎಸ್‌ಡಿಎಲ್‌ ಚಂದ್ರು, ನಿರ್ದೇಶನ–ಮೈಕೋ ಶಿವಣ್ಣ.

ಸ್ಥಳ–ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ, ಅಕ್ಟೋಬರ್‌ 11, ಸಂಜೆ 6.

**

‘ಶ್ರೀದೇವಿ ಮಹಾತ್ಮೆ’ ನಾಟಕ

 

ಸಂಚಾರಿ ಥಿಯೇಟರ್‌ ನಗರದಲ್ಲಿ ‘ಶ್ರೀದೇವಿ ಮಹಾತ್ಮೆ’ ನಾಟಕ ಪ್ರದರ್ಶಿಸಲಿದೆ. ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆಯುವ ದೈನಂದಿನ ಬದುಕಿನ ಸಾಮಾನ್ಯ ಸನ್ನಿವೇಶಗಳ ಗುಚ್ಛ .  

ವಸುಧೇಂದ್ರ ಅವರ ಸಣ್ಣ ಕತೆ ಆಧರಿಸಿ ಈ ರಂಗರೂಪ ಸಜ್ಜುಗೊಂಡಿದೆ. ಬದುಕಿನ ಓಟ, ನಗರೀಕರಣದ ಅಚ್ಚರಿಗಳು, ಕಳೆದುಹೋದ ಸೂಕ್ಷ್ಮತೆ, ಬದಲಾದ ಗ್ರಹಿಕೆ, ಸಹಜವೆನಿಸಿಬಿಡುವ ಅಸಹಜ ನಂಬಿಕೆಗಳು, ಕನಸುಗಳು, ಬದಲಾದ ಬದುಕಿನ ಗತಿ ಇವೆಲ್ಲವನ್ನೂ ನಾಟಕದಲ್ಲಿ ಅನಾವರಣಗೊಳ್ಳಲಿವೆ. ಬದುಕನ್ನು ಭಿನ್ನವಾಗಿ ನೋಡುವ ಬಗೆಯ ಜತೆಗೆ ಒಂದು ಸಣ್ಣ ಹೋರಾಟ ಕೂಡ ಇದೆ.  

ಬೆಳಕು–ಅರವಿಂದ್‌ ಕುಪ್ಳೀಕರ್‌, ರಂಗಸಜ್ಜಿಕೆ–ಶಶಿಧರ ಅಡಪ, ಸಂಗೀತ–ಗಜಾನನ ಟಿ.ನಾಯ್ಕ್‌, ರಂಗರೂಪ, ನಿರ್ದೇಶನ–ಎನ್‌.ಮಂಗಳಾ.

ಸ್ಥಳ–ರಂಗಶಂಕರ, ಅಕ್ಟೋಬರ್‌ 9, ರಾತ್ರಿ 7.30

**

ವೇರ್‌ ದ ಶಾಡೋ ಎಂಡ್ಸ್‌?

 

ನೆರಳು ಯಾವುದು, ನಿಜವಾದದ್ದು ಯಾವುದು? ಪುರಾಣ ಹಾಗೂ ಚರಿತ್ರೆಗಳ ನಡುವಿನ ಸಂಬಂಧ ಏನು? ಹೀಗೆ ಹತ್ತಾರು ಪ್ರಶ್ನೆಗಳ ಅಡಿಪಾಯದೊಂದಿಗೆ ‘ವೇರ್‌ ದ ಶಾಡೋ ಎಂಡ್ಸ್‌’ ನಾಟಕವನ್ನು ಕ್ರಿಯೇಟರ್‌ ಥಿಯೇಟರ್‌ ತಂಡದವರು ನಗರದಲ್ಲಿ ಪ್ರದರ್ಶಿಸಲಿದ್ದಾರೆ.

ಶಂಕರ ಫೌಂಡೇಶನ್‌ ಇತ್ತೀಚೆಗಷ್ಟೇ ‘ದಮ್ರು’ ಥಿಯೇಟರ್ ಕಟ್ಟಿದೆ. ಹೊಸ ವೇದಿಕೆ ಮೇಲೆ ನಾಟಕ ಮಾಡಲಾಗುತ್ತಿದೆ. ಇದಕ್ಕಾಗಿ ಕನಕಪುರ ರಸ್ತೆಯಲ್ಲಿರುವ ಥಿಯೇಟರ್ ಸಜ್ಜುಗೊಂಡಿದೆ.

ಅಕ್ಟೋಬರ್‌ ಮೊದಲ ವಾರದಲ್ಲಿ ಆರಂಭವಾದ ಐದು ದಿನಗಳ ಉತ್ಸವದಲ್ಲಿ ಪ್ರಮುಖವಾಗಿ ಈ ನಾಟಕ ಪ್ರದರ್ಶಿಸಲಾಗುತ್ತಿದೆ. ಈ ನಾಟಕದಲ್ಲಿರುವ ಕತೆ, ವಿವಿಧ ಪ್ರದರ್ಶನ ಕಲೆಗಳ, ಸಂಸ್ಕೃತಿಗಳ ಅಪರೂಪದ ಮಿಲನವಾಗಿದೆ. ಭೂತ–ವರ್ತಮಾನ, ಪುರಾಣ–ಚರಿತ್ರೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಒಂದು ವಿಶಿಷ್ಟ ಪ್ರಯೋಗ.

ಸಂಭಾಷಣೆ, ಹಾಗೂ ಹಾಸ್ಯ ಹದವಾಗಿ ಬೆರೆತು ಕಚಗುಳಿ ಇಡಲಿದೆ ಎಂಬುದು ತಂಡದ ಭರವಸೆ. ವಿನ್ಯಾಸ, ನಿರ್ದೇಶನ–ವೀಣಾ ಬಸವರಾಜಯ್ಯ, ರಚನೆ–ಶ್ರೀಕಾಂತ್‌ ರಾವ್‌, ನಟನೆ–ಲಕ್ಷ್ಮೀ ಚಂದ್ರಶೇಖರ್‌, ಪ್ರೀತಿ ಭಾರದ್ವಾಜ್‌, ವಿನಯಚಂದ್ರ, ಅಕ್ಷಯ ಗಾಂಧಿ, ಸಂಗೀತ–ಲಗೋರಿ ಬ್ಯಾಂಡಿನ ಗಾಯಕ ತೇಜಸ್‌ ಶಂಕರ್‌, ಬೆಳಕು–ಅರುಣ್‌ ಕುಮಾರ್‌.

ಸ್ಥಳ–ದಮ್ರು ಥಿಯೇಟರ್‌, ಶಂಕರ ಫೌಂಡೇಶನ್‌, ಕನಕಪುರ ರಸ್ತೆ, 8ನೇ ಮೈಲಿ, ಅಕ್ಟೋಬರ್‌ 9, ರಾತ್ರಿ 7.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು