ರಾಗಿಕಣದಲ್ಲಿ ‘ಹಾಲಕ್ಕಿ ರಾಮಾಯಣ’, ‘ಮಾಪಿಳ್ಳ ರಾಮಾಯಣ’

ಬುಧವಾರ, ಏಪ್ರಿಲ್ 24, 2019
32 °C

ರಾಗಿಕಣದಲ್ಲಿ ‘ಹಾಲಕ್ಕಿ ರಾಮಾಯಣ’, ‘ಮಾಪಿಳ್ಳ ರಾಮಾಯಣ’

Published:
Updated:
Prajavani

ರಾಮಾಯಣದ ಶ್ರೀರಾಮನ ಕಥೆ ಭಾರತದ ಉದ್ದಗಲಕ್ಕೂ ಹಬ್ಬಿಕೊಂಡು ಜೀವನಾಡಿಯಾಗಿದೆ. ಭಾರತದ ಬಹುಭಾಗದ ಜನ ತಮ್ಮದೇ ಸಂಸ್ಕೃತಿ ತಮ್ಮದೇ ಆದ ನೆಲೆಗಟ್ಟಿನಲ್ಲಿ ರಾಮನನ್ನು ಕಂಡುಕೊಂಡಿದ್ದಾರೆ.

ಕನಕದಾಸರ ಪ್ರಕಾರ ಶ್ರೀರಾಮನಿಗೆ ಅಕ್ಕಿಗಿಂತ ಪ್ರಿಯವಾದದ್ದು ರಾಗಿ. ಇದನ್ನು ದಾಸರು ತಮ್ಮ ‘ರಾಮಧಾನ್ಯ ಚರಿತೆ’ಯಲ್ಲಿ ಉಲ್ಲೇಖಿಸಿದ್ದಾರೆ (ಬಡವ ಶ್ರೀಮಂತರ ನಡುವಿನ ಜಗಳದ ಕಾವ್ಯಮಯವಾಗಿ ಅಭಿವ್ಯಕ್ತಿಸುವ ರಾಮಧಾನ್ಯ ರಾಗಿ ಹಾಗೂ ಅಕ್ಕಿಯಲ್ಲಿನ ಪೌಷ್ಟಿಕಾಂಶದ ಮಟ್ಟ, ಅದನ್ನು ಸ್ವೀಕರಿಸುವ ವರ್ಗದ ಪ್ರತಿಮೆಯನ್ನು ಪ್ರತಿನಿಧಿಸುತ್ತದೆ).

ಜೆ.ಪಿ. ನಗರದ ಗುಡ್ಡದಿಂದ ಬೆಂಗಳೂರು ದಕ್ಷಿಣದ ರಾಗಿಹಳ್ಳಿ ಎಲ್ಲವೂ ಹೆಚ್ಚು ರಾಗಿ ಉತ್ಪಾದನೆಯ ಪ್ರದೇಶವಾಗಿದವು. ಈ ನಿಟ್ಟಿನಲ್ಲಿ ರಾಗಿಕಣವು ರಾಮನ ಜನಪದ ಕಥೆಯನ್ನು ಅವನಿಗೆ ಪ್ರಿಯವಾದ ರಾಗಿ ಬೆಳೆಯುವ ಕ್ಷೇತ್ರದಲ್ಲಿ ಏ.14ರಂದು ಆಚರಿಸುತ್ತಿದೆ. 

ಅಂದು ಬೆಳಿಗ್ಗೆ 10.45ರಿಂದ 11.30ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಬುಡಕಟ್ಟು ಜನರ ರಾಮಾಯಣ ಎಂದು ಕರೆಯಯಲ್ಪಡುವ ‘ಸೀತಾ ಕಮ್ಮಿ’ಯನ್ನು ಆಯೋಜಿಸಲಾಗಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಜ್ಜಿಯ ಈ ಕತೆಯನ್ನು ಹೇಳಿದ್ದಳು. ಅವರ ಜೊತೆಗಾತಿ ಪದ್ಮಾವತಿ ಅವರು ಈ ಕಥೆಯನ್ನು ಹೇಳಲು ರಾಗಿಕಣಕ್ಕೆ ಬರುತಿದ್ದಾರೆ.


‘ಮಾಪಿಳ್ಳ ರಾಮಾಯಣ’​

ಮಧ್ಯಾಹ್ನ 12ರಿಂದ 1ರವರೆಗೆ ಕೇರಳ ರಾಜ್ಯದ ಮಲಬಾರಿನ ಮುಸ್ಲಿಮರ ರಾಮಾಯಣ ಎಂದೇ ಪ್ರಸಿದ್ದಿ ಪಡೆದಿರುವ ‘ಮಾಪಿಳ್ಳ ರಾಮಾಯಣ’ ಆಕರ್ಷಕ ವೇಷಭೂಷಣ ಹಾಗೂ ಸಪ್ಪಳಗಳಿಂದ ಕೂಡಿದೆ.

ಈ ರಾಮಾಯಣ ಪರಸ್ಪರ ಧರ್ಮಗಳ ನಡುವೆ ಗೌರವ ಸೂಚಕವಾಗಿ ಬೆಳೆದ ಸಂಸ್ಕೃತಿಯಾಗಿದೆ. ಕೇರಳ ವಡಗರದ ಆಶಾಲತಾ ತಂಡದ ಸದಸ್ಯರು ಸುಮಾರು 45 ನಿಮಿಷದ ಮಾಪ್ಪಿಳ ರಾಮಾಯಣ ಪ್ರದರ್ಶನ ನೀಡಲಿದ್ದಾರೆ.

ಸ್ಥಳ: ರಾಗಿಕಣ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಬನ್ನೇರುಘಟ್ಟ ರಸ್ತೆ, ಗೊಟ್ಟಿಗೆರೆ ಗ್ರಾಮ. ಸಂಪರ್ಕಕ್ಕೆ: 99726 76426

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !