ಶುಕ್ರವಾರ, ಸೆಪ್ಟೆಂಬರ್ 25, 2020
28 °C

ಖ್ಯಾತ ರಂಗ ನಿರ್ದೇಶಕ ಇಬ್ರಾಹಿಂ ಅಲ್ಕಾಜಿ ಇನ್ನಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Ebrahim Alkazi

ನವದೆಹಲಿ: ಖ್ಯಾತ ರಂಗ ನಿರ್ದೇಶಕ, ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಇಬ್ರಾಹಿಂ ಅಲ್ಕಾಜಿ (94) ಅವರು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದರು. 

ಅತಿ ಹೆಚ್ಚು ಅವಧಿಗೆ ಎನ್‌ಎಸ್‌ಡಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅಲ್ಕಾಜಿ ಅವರು, ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರ ‘ತುಘಲಕ್‌’ ಹಾಗೂ ಧರಂವೀರ್‌ ಭಾರತಿ ಅವರ ‘ಅಂಧಾ ಯುಗ್‌’ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು. ಜನಪ್ರೀಯ ನಟರಾದ ನಸೀರುದ್ದೀನ್‌ ಶಾ, ಓಂ ಪುರಿ ಮುಂತಾದ ನೂರಾರು ಕಲಾವಿದರಿಗೆ ಅಲ್ಕಾಜಿ ಗುರುಗಳಾಗಿದ್ದರು. 

‘ಮಧ್ಯಾಹ್ನ 2.45ರ ವೇಳೆಗೆ ಹೃದಯಾಘಾತದಿಂದ ತಂದೆ ಮೃತಪಟ್ಟರು’ ಎಂದು ಅವರ ಮಗ ಫೈಸಲ್‌ ಅಲ್ಕಾಜಿ ತಿಳಿಸಿದರು. 

ಪ್ರಧಾನಿ ಮೋದಿ ಸಂತಾಪ: ಅಲ್ಕಾಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ರಂಗಭೂಮಿಯ ಏಳಿಗೆಗೆ ದುಡಿದ ಹಾಗೂ ರಾಷ್ಟ್ರದ ಮೂಲೆಮೂಲೆಗೂ ರಂಗಭೂಮಿ ತಲುಪುವಂತೆ ಮಾಡಿದ ಅಲ್ಕಾಜಿ ಅವರ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ. ಕಲಾ ಜಗತ್ತು ಹಾಗೂ ಸಂಸ್ಕೃತಿಗೆ ಇವರ ಕೊಡುಗೆ ಶ್ಲಾಘನೀಯ. ಅವರ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.