ಸ್ಥಾವರಗೊಂಡ ಬೃಂದಾವನ ಸುತ್ತ ಒಂದು ಮಠದ ವ್ಯವಸ್ಥೆಯನ್ನು ಮುಖ್ಯತಃ ಮುನ್ನಡೆಸುವ ಎಳೆಯೊಂದನ್ನು ನಾಟಕ ತನ್ನೊಡಲೊಳಗೆ ಇಟ್ಟುಕೊಂಡಿದೆ. ಅದನ್ನು ಆಳವಾಗಿ ಜಿಜ್ಞಾಸೆಗೆ ಹಚ್ಚುವ ಜಡಭರತರ ‘ಸತ್ತವರ ನೆರಳು’ ನಾಟಕವು ಧರ್ಮ ಮತ್ತು ಅದಕ್ಕೆ ಜೋತು ಬಿದ್ದ ಮನುಷ್ಯ ಸಂಬಂಧವನ್ನು ಮರು ಆಲೋಚನೆಗೆ ತೊಡಗಿಸುವಂತೆ ಪ್ರೇರೇಪಿಸುತ್ತದೆ. ಮಠದ ದಿವಾನ ಕೃಷ್ಣಾಚಾರ್ಯರು ವಿದ್ಯಾನಿಧಿ ತೀರ್ಥರ ತರುವಾಯ ತನ್ನ ಹಿಡಿತದಲ್ಲಿಯೇ ಮಠವು ಉಳಿಯಬೇಕೆಂದು ಬಯಸಿದವರು. ಹಾಗೆ ಅದನ್ನು ಇಟ್ಟುಕೊಳ್ಳಲು ಹವಣಿಸುವರು. ದಿವಾನರು ಆ ದಿಸೆಯಲ್ಲಿ ಇಹದ ಸಂಸಾರವಂದಿತನಾದ ಒಬ್ಬನನ್ನು ಶೋಧಿಸಿ ತಂದು ಬಲವಂತ(?)ದಿಂದ ಮಠದ ಉತ್ತರಾಧಿಕಾರಿಯಾಗಿಸುವಲ್ಲಿ ಯಶಸ್ಸು ಕಾಣುವರು. ನಾಟಕದುದ್ದಕ್ಕೂ ಇಹ ಪರದ ಸಂಘರ್ಷಗೊಳ್ಳುವ ಇವೆರಡು ತುದಿಗಳ ಹೊಯ್ದಾಟವು ವರ್ತಮಾನದಲ್ಲಿ ಧರ್ಮಕಾರಣವು ಸಮಾಜಕಾರಣ ಮತ್ತು ರಾಜಕಾರಣದತ್ತ ಹೊರಳುದಾರಿಗೆ ತಿರುಗಿದುದನ್ನೂ ನಾಟಕ ಮತ್ತೆ ಮತ್ತೆ ಹೇಳುತ್ತದೆ. ಮಠಗಳು ಮತ್ತು ಅದರ ಪೀಠಗಳ ಸ್ವಾಮಿಗಳ ಬಹು ಚರ್ಚೆಗಳ ನುಡಿಮುತ್ತುಗಳನ್ನು ಜ್ಞಾಪಿಸುತ್ತದೆ. ಆ ಮಟ್ಟದಲ್ಲಿ ‘ಸತ್ತವರ ನೆರಳು’ ರಂಗ ಪಠ್ಯವು ಸಮಕಾಲೀನಗೊಂಡಿದೆ. ಹಾಗೆಯೇ ಈ ಹಿನ್ನೆಲೆಯಲ್ಲಿ ರಂಗ ಪ್ರಯೋಗವು ಯಶಸ್ಸನ್ನು ಕಂಡಿದೆ.

ಕಠೋರವಾದ ಪುರೋಹಿತರ ಬ್ರಾಹ್ಮಣ್ಯದ ವಾದಗಳನ್ನು ಯಾವುದೇ ಮುಲಾಜಿಲ್ಲದೇ ನಾಟಕಕಾರರು ಎತ್ತಿದ್ದಾರೆ. ಜಿ.ಬಿ.ಜೋಶಿಯವರು ಉತ್ತರ ಕರ್ನಾಟಕದ ದೇಸಿ ಕನ್ನಡದ ತಮ್ಮ ತೀಕ್ಷ್ಣನುಡಿಗಟ್ಟುಗಳ ಮೂಲಕ ಸಂವಾದಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹೆಣೆದು ಕೊಟ್ಟಿದ್ದಾರೆ. ಅದನ್ನು ಹುಲುಗಪ್ಪ ಕಟ್ಟೀಮನಿ ವಿನ್ಯಾಸಗೊಳಿಸಿ ನಿರ್ದೇಶನ ಮೂಲಕ ಕಟ್ಟಿಕೊಟ್ಟಿರುವರು.

ನಾಲ್ಕು ಮಠದ ಕಂಬಗಳು. ರಂಗದ ನಡುವೆ ಸಾಂಕೇತಿಕ ರೂಪದ ಬೃಂದಾವನ. ಅದರೆದುರು ಎರಡು ದೀಪ ಹಚ್ಚಿದ ಸಮಯ. ಅದರ ಸುತ್ತಲೂ ನಾಟಕವು ಬಿಚ್ಚಿಕೊಳ್ಳುತ್ತ ಸಾಗುತ್ತದೆ. ಹೆಣ್ಣು ಗಂಡು ಪಾತ್ರಗಳ ಕೋರಸ್ನ ಮೂವ್ಮೆಂಟಿನಲ್ಲಿ ಹಾಡೊಂದಿಗೆ ಬಿಗುವು ಪಡೆದು ನಾಟಕ ಆರಂಭಗೊಳ್ಳುತ್ತದೆ. ಅದು ಪ್ರಯೋಗದುದ್ದಕ್ಕೂ ಎದ್ದು ಕಾಣುವ ಅಂಶ. ಇಲ್ಲಿ ಗೃಹಿಣಿಯರ ಪಾತ್ರಗಳಲ್ಲಿ ಪ್ರಿಯಾಂಕಾ ಸಿದ್ಧಾರ್ಥ, ಅಕ್ಷತಾ, ಅಂಬಿಕಾ ಮತ್ತು ಕ್ಷಮಾ ಹೊಸಕೇರಿ ಅವುಗಳ ಸ್ವಭಾವಗಳನ್ವಯ ಅಭಿನಯ ನೀಡಿದರು. ಆದರೆ ಅದು ಎದ್ದು ಕಾಣುವ ಅಂಶವಾಗಿಲ್ಲ. ಇಲ್ಲಿ ಭಿನ್ನ ಸ್ವಭಾವಗಳ ಅಭಿವ್ಯಕ್ತಿಗೆ ಕೊಂಚ ಅವಕಾಶವಿದೆ. ಅದನ್ನು ಬಳಸುವುದನ್ನು ಈ ಮಹಿಳಾ ಪಾತ್ರಧಾರಿಗಳು ಮೈಗೂಡಿಸಿಕೊಳ್ಳಬೇಕು.

ಜರ್ಮನ್ ತರುಣಿ ಪಾತ್ರದ ಪ್ರಿಯಾಂಕಾ ಸಿದ್ಧಾರ್ಥ ಸಂಸ್ಕೃತ ಸಂಭಾಷಣೆಯನ್ನು ನುಡಿಸುವರು. ಅದು ಅಸ್ಖಲಿತವಾಗಿ ಬಂದಿದೆ. ಚಂದವೂ ಉಂಟು. ಆದರೆ ಅದಷ್ಟೇ ಸಾಲದು. ಅದಕ್ಕೊಂದು ಅದರದ್ದೇ ಆದ ವಿಶಿಷ್ಟ ಪಾತ್ರತ್ವವನ್ನು ನೀಡಿದರೆ ಇನ್ನಷ್ಟು ಪಾತ್ರಕ್ಕೆ ಸೊಬಗು ಹೆಚ್ಚುವುದು. ದೊರೆತ ಪುಟ್ಟ ಪ್ರಸಂಗದಲ್ಲೂ ಹಿರಿಯ ಕಲಾವಿದ ಪ್ರಮೋದ ಅಂಬೇಕರ ವಿದ್ಯಾನಿಧಿ ತೀರ್ಥರ ತಳಮಳತನದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವರು. ಅವರು ಬಯ್ಯುವ ಟಿಪಿಕಲ್ ‘ಲೌಡೀ ಮಗನ... ಬೋಳಿಮಗನ...’ ಬೈಗುಳವು ಹೆಚ್ಚಾಯಿತೇನೋ? ಮತ್ತೊಬ್ಬ ಹಿರಿಯ ಕಲಾವಿದ ಗೋಪಾಲ ಉಣಕಲ್ಲ ದಿವಾನ ಕೃಷ್ಣಾಚಾರ್ಯರ ಕರ್ಮಠತನಗಳನ್ನು ಅಗತ್ಯಕ್ಕೆ ತಕ್ಕುದಾಗಿ ಜೀವಿಸಿರುವರು. ಮೈಯಲ್ಲಿ ತಣ್ಣಗೆ ವಿಷವು ಹರಡಿದಂತೆ ದಿವಾನ ವರ್ತನೆಯು ಮಠದ ಬಗೆಗಿನ ಅವರ ವ್ಯಾಮೋಹವನ್ನು ಹೇಳುತ್ತಿತ್ತು. ದಿವಾನರ ಒತ್ತಡಕ್ಕೆ ಮಣಿದು ಮದುವೆಯಾದ ಬ್ರಾಹ್ಮಣ ಯುವಕನು ಒಲ್ಲದ ಮನಸ್ಸಿನಿಂದ ಸಂಸಾರ ತ್ಯಾಗ ಮಾಡುವನು. ದಿವಾನರ ಕೈಗೊಂಬೆಯಾಗಿ ಮಠದ ಉತ್ತರಾಧಿಪತಿಯಾಗಿ ನೇಮಕಗೊಳ್ಳುವನು. ಆತ ಸನ್ಯಾಸತ್ವವನ್ನು ತ್ಯಜಿಸಿ ಮರಳಿ ಸಂಸಾರಕ್ಕೆ ಸಾಗಲು ಹವಣಿಸಿದರೂ ದಿವಾನರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುವನು. ಆ ನೇಮಕವೂ ಸಹ ಒಂದು ದಿವಾನರ ತಂತ್ರವೇ ಸರಿ. ‘ಮೋಹ ಈ ದೇಹದೊಟ್ಟಿಗೇ ಬಂದದ... ಈ ಚರ್ಮ ಸುಲಿದರ ಸಾವಿರ ನಾಯಿಗಳು ಹೊರಬಂದು ಬೊಗಳತಾವ... ಅದಕ್ಕ ಅವನ್ನ ಹೊರಗೋಗಿ ಬಿಟ್ಟು ಬರತೀನಿ...’ಎಂಬ ಆತನ ಆಕ್ರಂದನ ಯಾರಿಗೂ ಕೇಳಿಸುವುದೇ ಇಲ್ಲ.

ನಾಟಕದ ಮಧ್ಯಂತರದಲ್ಲಿ ಅಳಪುಡಿ ಶೀನನಾಗಿ ಹುಲುಗಪ್ಪ ಕಟ್ಟೀಮನಿ ಪ್ರವೇಶವು ರಂಗಮಂಚದಲ್ಲಿ ಮಿಂಚು ಝಳಪಿಸಿದಂತೆ ಸಂಚಲನ ಉಂಟು ಮಾಡುತ್ತದೆ. ಅವರ ‘ನೀ ಸುಳ್ಳು, ನಾ ಸುಳ್ಳು, ಈ ಮಠ ಸುಳ್ಳು, ಈ ವೃಂದಾವನ ಸುಳ್ಳು, ವಾದ ಸುಳ್ಳು, ವಾಕ್ಯಾರ್ಥ ಸುಳ್ಳು, ಎಲ್ಲಾ ಸುಳ್ಳು... ಯುಗ ಯುಗಗಳಿಂದ ಬ್ರಾಹ್ಮಣ ಆಸೆ ಬುರುಕತನದಿಂದ ಸಂಗ್ರಹಿಸಿಟ್ಟ ತಪಶ್ಯಕ್ತಿಯನ್ನ ಬಿತ್ತಿ ಬೆಳೆಯೋದಾಗಲಿಲ್ಲ... ನೂರು ಮಠ ಕಟ್ಟಿ , ಸಾವಿರ ವೃಂದಾವನ ಕಟ್ಟಿ ಉರಿಯನ್ನ ದಮನ ಮಾಡೋದಾಗಲಿಲ್ಲ. ನಾರಾಯಣ ನಿನ್ನ ಅಂಗೈ ಏನು ತಡದೀತೋ ಈ ಉರಿಗೇ..’ ಈ ವಿಭಿನ್ನ ಶೈಲಿಯ ಮಾತುಗಳ ಏರಿಳಿತದಲ್ಲಿ, ಆ ಶೀನನ ನಡೆದಾಟವು ಹುರುಪಿಂದ ಕೂಡಿ ಪ್ರೇಕ್ಷಕನನ್ನು ಬಿಗಿದು ಹಿಡಿದಿತ್ತು.

ಹಿರೇ ಆಚಾರ್ಯರಾಗಿ ವಿಜಯೇಂದ್ರ ಅರ್ಚಕ, ಗುಣನಿಧಿ ತೀರ್ಥ ಮತ್ತು ಶ್ರೀಪಾದರಾಗಿ ರಾಜು, ನಾರಾಯಣರಾಗಿ ಹರೀಶ ದೊಡಮನಿ, ಅಡವಿ ಆಗಿ ಪ್ರಸಾದ ಕಂಬಳಿ, ಬಂಡಿನರಸಿಂಹನಾಗಿ ಸಂತುಕೊಪ್ಪಳ, ಕೀರ್ತನಕಾರನಾಗಿ ಆನಂದ ಕುಲಕರ್ಣಿ, ನಿರೂಪಕರಾಗಿ ಹರೀಶ ಜಿಂಕೆ, ಭಾಗ್ಯಪಾಲ ಅಭಿನಯಿಸಿರುವರು. ರಾಘವ ಕಮ್ಮಾರ ಹಾಡುಗಾರಿಕೆ ಮತ್ತು ಸಂಗೀತ ನಾಟಕಕ್ಕೆ ಕಳೆತಂದಿದೆ.

ಧಾರವಾಡ ರಂಗಾಯಣದ ತಾತ್ಕಾಲಿಕ ಕಲಾವಿದರು ಅಭಿನಯಿಸಿದ ಈ ನಾಟಕ ಸೃಜನಾ ರಂಗಮಂದಿರದಲ್ಲಿ ಈಚೆಗೆ ಪ್ರಯೋಗ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.