ರಂಗಶಂಕರ: ಮಂಗಳವಾರ ಸೈಲೆಂಟ್ ಥಿಯೇಟರ್ ಲ್ಯಾಬೊರೇಟರಿ ತಂಡದಿಂದ `ಸುಷ್ಮಿತಾ ಅಂಡ್ ನೆಸ್ಲಿಂಗ್ಸ್~ (ರಚನೆ: ಪೂರ್ಣಚಂದ್ರ ತೇಜಸ್ವಿ. ನಿರ್ದೇಶನ: ವಿ. ವಿದ್ಯಾ) ನಾಟಕ.

ಬುಧವಾರ ರಂಗಸೌರಭ ತಂಡದಿಂದ `ಗಂಗಾವತರಣ~ (ಮೂಲ: ದ ರಾ ಬೇಂದ್ರೆ. ರಂಗರೂಪ, ನಿರ್ದೇಶನ: ರಾಜೇಂದ್ರ ಕಾರಂತ) ನಾಟಕ.ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರಾವಾಹಿಗಳು ಗಂಗಾವತರಣ ಕಥೆಯಲ್ಲಿ ಘಟಿಸುತ್ತವೆ.

ಒಂದು ಅರ್ಥದಲ್ಲಿ ಕಥಾ ನಾಯಕ ಅವಮಾನ, ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುವುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ `ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ~ ಸೇರಿ ಹದಿನಾರು ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ.

ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಗಳನ್ನು ತೊಳೆಯಲು ನೂರಾರು ಭಗೀರಥರು ಗಂಗೆಯರು ಬರಬೇಕೆಂದು ಸಮಾಜಕ್ಕೆ ಸಂದೇಶ ನೀಡುತ್ತದೆ.

ರಂಗ ಸೌರಭ ತಂಡವು 11 ವರ್ಷಗಳಿಂದ ಇಂದಿನವರೆಗೆ ಹಲವು ಅತ್ಯುತ್ತಮ ನಾಟಕಗಳನ್ನು ನಿರ್ಮಿಸಿ ನೋಡುಗರನ್ನು ತನ್ನೆಡೆಗೆ ಸೆಳೆದುಕೊಂಡಿದೆ. `ಶಠವಿ, ಸಾವು ಬಂತು ಸಾವು, ಘಾಸಿರಾಮ್ ಕೊತ್ವಾಲ್, ಕಾಕನಕೋಟೆ, ಶಸ್ತ್ರಪರ್ವ, ಮೈಸೂರು ಮಲ್ಲಿಗೆ, ಗಂಗಾವತರಣ~ ಹೀಗೆ ಹಲವು ನಾಟಕಗಳನ್ನು ನಿರ್ಮಿಸಿದೆ.

ಈಗ ಅದು ಪ್ರದರ್ಶಿಸಲಿರುವ `ಗಂಗಾವತರಣ~ ಕವಿ ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಆಧರಿಸಿದ ನಾಟಕ. ಇದು ಭಾರತ ಯಾತ್ರಾ ಕೇಂದ್ರ ನಡೆಸಿದ ಸ್ಪರ್ಧೆಯಲ್ಲಿ 2009-2010 ನೇ ಸಾಲಿನಲ್ಲಿ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಹತ್ತು ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.

ನಂತರ ಎಚ್ಚೆನ್ ಕಲಾಕ್ಷೇತ್ರದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಗೆದ್ದು ಜನಮೆಚ್ಚುಗೆಯನ್ನು ಪಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಐದು ಪ್ರದರ್ಶನಗಳನ್ನು ನಡೆಸಿದೆ.

ಪ್ರತಿ ಪ್ರದರ್ಶನಕ್ಕೂ ನಾಡಿನ ಶ್ರೇಷ್ಠ ಸಾಹಿತಿಗಳು, ಕವಿಗಳು, ಕಲಾವಿದರುಗಳು ಆಗಮಿಸಿ ಮೆಚ್ಚಿ ಮಾತನಾಡಿದ್ದು ವಿಶೇಷ. ಕೆ.ಎಸ್. ನಿಸಾರ್ ಅಹ್ಮದ್, ಎಚ್.ಎಸ್. ವೆಂಕಟೇಶಮೂರ್ತಿ, ಮಲ್ಲೆಪುರಂ ಜಿ ವೆಂಕಟೇಶ್, ಶತಾವಧಾನಿ ಆರ್ ಗಣೇಶ್, ಕಾ.ತ.ಚಿಕ್ಕಣ್ಣ ಇಂಥ ಮಹನೀಯರುಗಳು ನಾಟಕವನ್ನು ನೋಡಿ ಆನಂದಪಟ್ಟಿದ್ದಾರೆ.
ಇಷ್ಟಕ್ಕೇ ನಿಲ್ಲದೆ ಹರಿದ `ಗಂಗಾವತರಣ~ ನಾಟಕ ತಂಡ ಉತ್ತರ ಕರ್ನಾಟಕದ ಕಡೆ ಹೋಗಿ ಪ್ರದರ್ಶನ ನೀಡಿ ಬಂದಿದೆ. ಮೆಚ್ಚುಗೆ ಗಳಿಸಿದೆ.

ನಿರ್ದೇಶಕ:  `ಗಂಗಾವತರಣ~ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ರಾಜೇಂದ್ರ ಕಾರಂತ್ ಅವರದ್ದು. ಮೂರು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ವಿಶಿಷ್ಟ ಪ್ರಯೋಗ ಗಳಾದ `ಮೈಸೂರು ಮಲ್ಲಿಗೆ, ಮೂಕಜ್ಜಿಯ ಕನಸುಗಳು, ಭ್ರೂಣ, ಪೊಲೀಸ್, ಸಂಜೆಹಾಡು, ಗೂಡು, ತಂದೆ, ಮುದ್ದಣ್ಣನ ಪ್ರಮೋಷನ್ ಪ್ರಸಂಗ~ ಮತ್ತಿತರ ಯಶಸ್ವಿ ನಾಟಕಗಳನ್ನು ಕೊಟ್ಟಿದ್ದಾರೆ.

ಇದಲ್ಲದೆ ಹಲವಾರು ಪ್ರಸಿದ್ಧ ನಾಟಕ ತಂಡ ಗಳಾದ ಚಿತ್ತಾರ, ಹಂದರ, ಜನಪದ, ಸ್ಪಂದನ, ನಟರಂಗ, ಪ್ರಯೋಗರಂಗ, ಕಲಾಗಂಗೋತ್ರಿ, ರಂಗಸೌರಭ, ರಂಗತೋರಣ ಜತೆಗೂಡಿ ಹಲವಾರು ಪ್ರಸಿದ್ಧ ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.

ರಾಜೇಂದ್ರ ಕಾರಂತ್ ಮೂಲತಃ ಕಾರ್ಪೊರೇಷನ್ ಬ್ಯಾಂಕಿನಲ್ಲಿ ವೃತ್ತಿ ಆರಂಭಿಸಿ (ಬಿಎಸ್ಸಿ, ಎಂಎ ಕನ್ನಡ ಮತ್ತು ಕನ್ನಡದಲ್ಲಿ ಚಿನ್ನದ ಪದಕ) ಅಂತರ್ ಬ್ಯಾಂಕ್ ನಾಟಕ ಸ್ಪರ್ಧೆ ಗಳಲ್ಲಿ ತೊಡಗಿಸಿಕೊಂಡರು.

ಇದಕ್ಕೂ ಮುಂಚೆ ಚಿತ್ತಾರ ತಂಡದ ಮೂಲಕ ಹಲವಾರು ವಿಭಿನ್ನ ಹಾಗೂ ಯಶಸ್ವಿ ನಾಟಕದ ಪ್ರಯೋಗಗಳನ್ನು ಸಹ ಮಾಡಿದ್ದರು. ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ, ನಟಿಸಿದ್ದಾರೆ.

ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.