ಬೆಂಗಳೂರು: ಅನುಪಮಾ ಟಿವಿ ಶೋ ಮೂಲಕ ಜನರ ಮನ ಗೆದ್ದಿರುವ ಕಿರುತೆರೆ ನಟಿ ನಿಧಿ ಶಾ, ಬೋಲ್ಡ್ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸ್ನಾನಗೃಹದಲ್ಲಿ ಇರುವ ಫೋಟೊವನ್ನು ನಟಿ ನಿಧಿ ಪೋಸ್ಟ್ ಮಾಡಿದ್ದು, ಅವಳು ಖುಷಿಯನ್ನು ಹೊದ್ದುಕೊಂಡಿದ್ದಾಳೆ ಮತ್ತು ಪ್ರೀತಿಯಲ್ಲಿ ನೆನೆದಿದ್ದಾಳೆ ಎಂಬ ಅಡಿಬರಹ ನೀಡಿದ್ದಾರೆ.
ನಿಧಿ ಫೋಟೊದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಜತೆಗೆ ಮೇಕಪ್ ಇಲ್ಲದ ಫೋಟೊ ಇದಾಗಿದ್ದು, ಅನುಪಮಾದ ಕಿಂಜಲ್ ಶಾ ಖ್ಯಾತಿಯ ನಿಧಿ ಶಾ, ಸಾಮಾಜಿಕ ತಾಣಗಳಲ್ಲಿ ಕೂಡ ಮಿಂಚುತ್ತಿರುತ್ತಾರೆ.