ಭಾನುವಾರ, ಏಪ್ರಿಲ್ 11, 2021
27 °C

ಮನೆಯಲ್ಲೇ ಕೂತು ಬಿಗ್‌ಬಾಸ್‌ ಮನೆಯೊಳಗೆ ಹೋಗಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೀವು ಬಿಗ್‌ಬಾಸ್‌ ಸ್ಪರ್ಧಿ ಅಲ್ಲದೇ ಇದ್ದರೂ, ಬಿಗ್‌ಬಾಸ್‌ ಮನೆ ಒಳಗೆ ಪ್ರವೇಶಿಸಿ ಸುತ್ತಾಡುವ ಅವಕಾಶವನ್ನು ಕಲರ್ಸ್‌ ಕನ್ನಡವು ಈ ಬಾರಿ ನೀಡಿದೆ. ಇದಕ್ಕಾಗಿ 3ಡಿ ತಂತ್ರಜ್ಞಾನವನ್ನು ಬಳಸಲಾಗಿದ್ದು, ಮನೆಯಲ್ಲೇ ಕೂತು ಬಿಗ್‌ಬಾಸ್‌ ಮನೆಯೊಳಗೆ ಅಡ್ಡಾಡಿ ಬರಬಹುದು.

ಬಿಗ್‌ಬಾಸ್‌ 8ನೇ ಆವೃತ್ತಿ ಭಾನುವಾರದಿಂದ ಆರಂಭವಾಗಿದ್ದು, ಇದರ ಬೆನ್ನಲ್ಲೇ ಕಲರ್ಸ್‌ ಕನ್ನಡದ ವೆಬ್‌ಸೈಟ್‌ನಲ್ಲಿ ಬಿಗ್‌ಬಾಸ್‌ ಮನೆಯ 3ಡಿ ವ್ಯೂ ಹಾಕಲಾಗಿದೆ. ಇಲ್ಲಿ ಬಿಗ್‌ಬಾಸ್‌ ಮನೆಯೊಳಗಿನ ಜೈಲು, ಈಜುಕೊಳ, ಲಿವಿಂಗ್‌ ರೂಮ್‌, ಅಡುಗೆ ಮನೆ, ಸ್ಟೋರ್‌ ರೂಂ, ಜಿಮ್‌ ಪ್ರದೇಶ, ದೇವರ ಕೋಣೆ,  ಎಲ್ಲವನ್ನೂ ಸುತ್ತಾಡಿ ಬರಬಹುದು. ಮನೆಯೊಳಗೆ ಪ್ರವೇಶಿಸಿದಂತ ಅನುಭವವನ್ನು ಇದು ನೀಡುತ್ತಿದೆ. ಹೈಡೆಫಿನೇಷನ್‌ ಕ್ಯಾಮೆರಾಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು, ಮನೆಯ ಇಂಚಿಂಚೂ ಭಾಗವನ್ನು ನೋಡಬಹುದಾಗಿದೆ ಹಾಗೂ ಮನೆಯೊಳಗಿನ ವಿನ್ಯಾಸವನ್ನು ಆನಂದಿಸಬಹುದಾಗಿದೆ.

ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲೂ ಈ ಬಾರಿ ಹಲವು ಫಿಲ್ಟರ್ಸ್‌ಗಳನ್ನು ನೀಡಲಾಗಿದ್ದು, ಈ ಮೂಲಕ ಬಿಗ್‌ಬಾಸ್‌ ಮನೆಯ ಒಳಗೇ ಇರುವಂತೆ ವಿಡಿಯೊ ಹಾಗೂ ಸೆಲ್ಫಿ ಚಿತ್ರಗಳನ್ನು ಜನರು ಕ್ಲಿಕ್ಕಿಸಿಕೊಳ್ಳಬಹುದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕಲರ್ಸ್‌ ಕನ್ನಡ ಬಿಜಿನೆಸ್‌ ಮುಖ್ಯಸ್ಥ ಪರಮೇಶ್ವರ್‌ ಗುಂಡ್ಕಲ್‌, ‘ಈ ರಿಯಾಲಿಟಿ ಶೋ ಜನರಿಗೆ ನೀಡುವ ಸಿನಿಮ್ಯಾಟಿಕ್‌ ಅನುಭವವನ್ನು ಗಮನದಲ್ಲಿ ಇರಿಸಿಕೊಂಡು, ಜನರಿಗೆ ಮನೆಯನ್ನು 3ಡಿಯಲ್ಲಿ ತೋರಿಸಿದ್ದೇವೆ. ಮನೆಯಲ್ಲೇ ಕುಳಿತು ಬಿಗ್‌ಬಾಸ್‌ ಮನೆಯನ್ನು ಸುತ್ತಾಡಿ ಬರಬಹುದು’ ಎಂದಿದ್ದಾರೆ.

ಲಿಂಕ್‌: https://www.colorskannada.com/bigg-boss-house-3d-tour/

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು