ಶನಿವಾರ, ಮೇ 15, 2021
25 °C

Bigg Boss 8; ಈ ವಾರ 8 ಮಂದಿ ಮೇಲೆ ಎಲಿಮಿನೇಶನ್ ತೂಗುಗತ್ತಿ..!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯ 7ನೇ ವಾರದ ಎಲಿಮಿನೇಶನ್‌ಗೆ 8 ಮಂದಿ ನಾಮಿನೇಟ್ ಆಗಿದ್ದಾರೆ. ಅರವಿಂದ್, ಮಂಜು ಪಾವಗಡ, ರಾಜೀವ್, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್ ಮತ್ತು ಶಮಂತ್ ಈ ಪಟ್ಟಿಯಲ್ಲಿದ್ದಾರೆ.

ಸುದೀಪ್ ಅನಾರೋಗ್ಯದ ಹಿನ್ನೆಲೆಯಲ್ಲಿ ವೀಕೆಂಡ್ ಎಪಿಸೋಡ್‌ ಸಾರಥ್ಯವನ್ನು ಯಾರು ವಹಿಸುತ್ತಾರೆ? ಎಂಬ ಪ್ರಶ್ನೆಯ ಜೊತೆ ಈ 8 ಮಂದಿಯಲ್ಲಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲವೂ ಮನೆ ಮಾಡಿದೆ.

ಪಟ್ಟಿಯಲ್ಲಿ ಮನೆಯ ಅತ್ಯುತ್ತಮ ಸ್ಪರ್ಧಾಳುಗಳು: ಈ ವಾರ ಮನೆಯಿಂದ ಹೊರಬರಲು ನಾಮಿನೇಟ್ ಆಗಿರುವ ಸದಸ್ಯರಲ್ಲಿ ಬಹುತೇಕರು ಮನೆಯ ಅತ್ಯುತ್ತಮ ಸ್ಪರ್ಧಿಗಳು. ಅರವಿಂದ್, ಮಂಜು ಪಾವಗಡ, ರಾಜೀವ್, ದಿವ್ಯಾ ಸುರೇಶ್ ಮನೆಯ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮಗೆ ಅವರು, ಅವರಿಗೆ ನಾವು ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ಪರಸ್ಪರ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ, ಇವರೆಲ್ಲರೂ ಈ ಬಾರಿ ವೀಕ್ಷಕರ ಮತಗಳ ಮೂಲಕ ಪರೀಕ್ಷೆ ಗೆದ್ದು ಮನೆಯಲ್ಲಿ ಮುಂದುವರಿಯಬೇಕಿದೆ.

ಇನ್ನು, 6ನೇ ವಾರ ಅಷ್ಟಾಗಿ ಆಕ್ಟಿವ್ ಆಗಿರದ ಸಿಂಗರ್ ವಿಶ್ವನಾಥ್ ಅವರ ಹೆಸರನ್ನು ಮನೆಯ ಹಲವು ಸದಸ್ಯರು ಸೂಚಿಸಿದರು. ನಾಯಕನ ಅಧಿಕಾರ ಬಳಸಿ ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಅವರನ್ನು ಟಾರ್ಗೆಟ್ ಮಾಡಿದರು. ಈ ವಾರ ಮನೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ನಾಮಿನೇಟ್ ಮಾಡಿದರು. ಈ ವಿಷಯಕ್ಕೆ ದಿವ್ಯಾ ಅಸಮಾಧಾನ ಹೊರ ಹಾಕಿದ್ದರು. ನಾಮಿನೇಟ್ ಬಗ್ಗೆ ಆಕ್ಷೇಪವಿಲ್ಲ. ಆದರೆ, ಅದಕ್ಕೆ ನೀವು ಕೊಟ್ಟ ಕಾರಣ ಸೂಕ್ತವಾಗಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ.. Bigg Boss-8| ಸುದೀಪ್‌ಗೆ ಅನಾರೋಗ್ಯ: ಬೇರೊಬ್ಬ ನಿರೂಪಕರ ಮೂಲಕ ‘ವಾರದ ಕಥೆ'?

ಇತ್ತ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಬಂದಿದ್ದ ಚಕ್ರವರ್ತಿ ಚಂದ್ರಚೂಡ್ ನಿರೀಕ್ಷೆಯಂತೆ ಎಲಿಮಿನೇಶನ್ ಅಗ್ನಿಪರೀಕ್ಷೆಗೆ ನಾಮಿನೇಟ್ ಆದರು. ಒಡೆದು ಆಳುವ ನೀತಿ, ನಗುತ್ತಲೆ ಬೇರೆಯವರ ಮನಸು ನೋಯಿಸುವ ಅವರ ವರ್ತನೆ ಬಗ್ಗೆ ಆಕ್ಷೇಪ ಕೇಳಿಬಂದಿತು. ಪ್ರಶಾಂತ್ ಸಂಬರಗಿ ಬಗ್ಗೆಯೂ ಅಸಮಾಧಾನ ಇದೆಯಾದರೂ ನಾಯಕನಾಗಿರುವುದರಿಂದ ನಾಮಿನೇಶನ್‌ನಿಂದ ಸೇಫ್ ಆದರು.

ಮನೆಯ ಲಕ್ಕಿ ಹುಡುಗ ಎಂದೇ ಕರೆಸಿಕೊಳ್ಳುವ ಶಮಂತ್ ಅವರು ಕಳೆದ ವಾರ ಹಿಂದೆಂದೂ ನಡೆಯದ ಅಪರೂಪದ ಘಟನೆಯಿಂದಾಗಿ ವೈಜಯಂತಿ ಅವರಿಂದ ಜೀವದಾನ ಪಡೆದು ಸೇಫ್ ಅಗಿ ಮುಂದುವರಿದಿದ್ದಾರೆ. ಆದರೆ, ಅವರಿಗೆ ಜನರ ಒಲವು ಸಿಗದ ಕಾರಣ ಮತ್ತೆ ಸುದೀಪ್ ನೇರ ನಾಮಿನೇಟ್ ಮಾಡಿದ್ದರು. ಒಂದು ವೇಳೆ, ಈ ವಾರದ ವೀಕೆಂಡ್‌ನ ಎಲಿಮಿನೇಶನ್ ಪ್ರಕ್ರಿಯೆ ನಡೆಯದಿದ್ದರೆ ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದಲ್ಲಿ, ಮತ್ತೆ ಒಂದು ವಾರ ಶಮಂತ್ ಅಥವಾ ಈ ವಾರ ಹೊರಹೋಗಬೇಕಿದ್ದ ಸದಸ್ಯನಿಗೆ ಬೋನಸ್ ಸಿಕ್ಕಂತಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು