ಭಾನುವಾರ, ಫೆಬ್ರವರಿ 16, 2020
20 °C

ಶೈನ್‌ ಶೆಟ್ಟಿಗೆ ‘ಬಿಗ್‌ ಬಾಸ್’ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಿರುತೆರೆ ನಟ ಶೈನ್‌ಶೆಟ್ಟಿ ಅವರು ಕಲರ್ಸ್‌ ಕನ್ನಡ ವಾಹಿನಿಯ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನ ಏಳನೇ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.  

ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಕಾರ್ಯಕ್ರಮದ ನಿರೂಪಕ ನಟ ಸುದೀಪ್‌, ‘ಬಿಗ್‌ಬಾಸ್‌’ ಪಟ್ಟಕ್ಕೆ ಶೈನ್‌ಶೆಟ್ಟಿ ಅವರು ಆಯ್ಕೆಯಾಗಿರುವುದಾಗಿ ಅವರ ಕೈ ಎತ್ತಿ ಘೋಷಿಸಿದರು. ಪ್ರತಿಸ್ಪರ್ಧಿ ನಟ ಕುರಿ ಪ್ರತಾಪ್ ರನ್ನರ್‌ ಅಪ್‌ ಆದರು. ಫೈನಲ್‌ಗೆ ನೇರವಾಗಿ ಪ್ರವೇಶಿಸಿದ್ದ ವಾಸುಕಿ ವೈಭವ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಶೈನ್‌ಶೆಟ್ಟಿ ಅವರಿಗೆ ಬಹುಮಾನವಾಗಿ ₹50 ಲಕ್ಷ ನಗದು, ಟ್ರೋಫಿ ಹಾಗೂ ಕಾರು ನೀಡಲಾಯಿತು. 

20 ಸ್ಪರ್ಧಿಗಳು ಈ ಬಾರಿಯ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದರು. ಪ್ರೇಕ್ಷಕರ ಮತದಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಖುಷಿ ಹಂಚಿಕೊಂಡ ಶೈನ್‌ಶೆಟ್ಟಿ, ’ಇದು ನನ್ನ ಜೀವನದ ಗೆಲುವು’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು